ಬೆಂಗಳೂರು,ನವೆಂಬರ್,27,2023(www.justkannada.in): ಕೇಂದ್ರ ರಾಜ್ಯ ಸರ್ಕಾರಗಳ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ದುಡಿವ, ದಮನಿತರ ಹಕ್ಕೊತ್ತಾಯಗಳಿಗಾಗಿ ನವೆಂಬರ್ 26ರಿಂದ ಮೂರು ದಿನಗಳಕಾಲ ಸಂಯುಕ್ತ ಹೋರಾಟ-ಕರ್ನಾಟಕ ( ರೈತ, ದಲಿತ,ಕಾರ್ಮಿಕ ವಿದ್ಯಾರ್ಥಿ,ಯುವಜನ ಮಹಿಳಾ ಸಮನ್ವಯ ಸಮಿತಿಯಿಂದ ದುಡಿವ ಜನರ ಮಹಾ ಧರಣಿ ನಡೆಸಲಾಗುತ್ತಿದೆ
ಈ ಕುರಿತು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯಲಾಗಿದ್ದು ಪತ್ರದ ವಿವರ ಹೀಗಿದೆ…
ದೆಹಲಿಯನ್ನು ಸುತ್ತುವರೆದು ಐತಿಹಾಸಿಕ ರೈತ ಹೋರಾಟ ನಡೆದದ್ದು, ಕಡೆಗೂ ಮೋದಿ ಸರ್ಕಾರ ರೈತರ ಹಕ್ಕೊತ್ತಾಯಗಳಿಗೆ ಮಣಿದು, ಮೂರು ಕೃಷಿ ಕಾಯ್ದೆಗಳ ಜಾರಿಯನ್ನು ಹಿಂತೆಗೆದುಕೊಂಡದ್ದು ಮತ್ತು ರೈತರ ಇನ್ನಿತರ ಹಕ್ಕೊತ್ತಾಯಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದು ತಮ್ಮ ಗಮನದಲೂ, ಇರುತ್ತದೆ, ಆದರೆ ತದನಂತರ ರೈತರ ಯಾವ ಹಕ್ಕೊತ್ತಾಯಗಳಿಗೂ ಮೋದಿ ಸರ್ಕಾರ ಕಿಂಚಿತ್ತೂ ಸ್ಪಂದಿಸಿಲ್ಲ ಅದೇ ರೀತಿಯಲ್ಲಿ, ಕಾರ್ಮಿಕರ ಯಾವ ಹಕ್ಕೊತ್ತಾಯಗಳಿಗೂ ಓಗೊಡದೆ ಸಾಲು ಸಾಲು ಕಾರ್ಮಿಕ ಕಾಯ್ದೆಗಳನ್ನು ಹಾಗೂ ಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ ಕೇಂದ್ರ ಸರ್ಕಾರದ ದುಡಿಯುವ ಜನರ ವಿರೋಧಿಯಾದ ಹಾಗೂ ಕಾರ್ಪೊರೇಟ್ ಪರವಾದ ಈ ನಡತೆಯನ್ನು ಖಂಡಿಸಿ ಅಖಿಲ ಭಾರತ ರೈತರ ಹಾಗೂ ಕಾರ್ಮಿಕರ ಜಂಟಿ ವೇದಿಕೆಗಳಾದ ಎಸ್ ಕೆ ಎಂ [ಸಂಯುಕ್ತ ಕಿಸಾನ್ ಮೋರ್ಭಾ] ಮತ್ತು ಜೆಸಿಟಿಯು [ಜಾಯಿಂಟ್ ಕಮಿಟಿ ಆಫ್ ಸೆಂಟ್ರಲ್ ಟ್ರೇಡ್ ಯೂನಿಯನ್ಸ್] ಜಂಟಿಯಾಗಿ ನವೆಂಬರ್ 26-27-28 ಮೂರು ದಿನಗಳ ಕಾಲ ಮಹಾ ಧರಣಿಯನ್ನು ನಡೆಸಲು ಕರೆ ನೀಡಿವೆ.
ಪ್ರಮುಖ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಫ್ರೀಡಂ ಪಾರ್ಕಿನಲ್ಲಿ ಮೂರು ದಿನಗಳ ಹೋರಾಟ ಹಮ್ಮಿಕೊಳ್ಳಲಾಗಿದೆ. 26ನ್ನು ಸಂವಿಧಾನ ಸಂಕಲ್ಪ ದಿನವಾಗಿ ಆಚರಿಸಿ 27-28 ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.
ವಿಷಾದದ ವಿಚಾರವೆಂದರೆ ಕೇಂದ್ರ ಸರ್ಕಾರದ ನಿರ್ದೇಶನಗಳ ಮೇರೆಗೆ ಕಳೆದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಕಾಂಗ್ರೆಸ್ ಸರ್ಕಾರ ರಾಜ್ಯದಲಿ.. ಅಧಿಕಾರಕ್ಕೆ ಬಂದು ಆರು ತಿಂಗಳಾಗಿದ್ದರೂ ವಾಪಾಸ್ ಪಡೆದಿಲ್ಲ… ಎಪಿಎಂಸಿ ಕಾಯ್ದೆಯೊಂದು ವಿಧಾನ ಸಭೆಯಲಿ.. ಅನುಮೋದನೆಗೊಂಡು, ಮೇಲ್ಮನೆಯಲಿ.. ಬಿದ್ದು ಹೋಯಿತು. ಆದರೆ ತದನಂತರ ಅದರ ಪ್ರಕ್ರಿಯೆಯನ್ನು ಆಲಿ…ಗೇ ಕೈಬಿಡಲಾಗಿದೆ. ಇವಲದೆ ವಿವಿಧ ದುಡಿಯುವ ಹಾಗೂ ದಮನಿತ ಜನವರ್ಗಗಳು ಆಗ್ರಹಿಸುತ್ತಾ ಬಂದಿರುವ ಅನೇಕ ಹಕ್ಕೊತ್ತಾಯಗಳು ತಮ್ಮ ಸರ್ಕಾರ ಬಂದರೆ ಬಗೆಹರಿಯುತ್ತವೆ ಎಂಬ ನಿರೀಕ್ಷೆ ಇತ್ತು. ಅದಕ್ಕಾಗಿಯೇ ಬಿಜೆಪಿ ಸರ್ಕಾರವನ್ನು ಸೋಲಿಸುವ ನಿರ್ಧಾರವನ್ನು ಅನೇಕ ಸಂಘಸಂಸ್ಥೆಗಳು ತೆಗೆದುಕೊಂಡು ಕೆಲಸ ಮಾಡಿದವು. ಆದರೆ ಈ ಜನವರ್ಗಗಳು ಎತ್ತಿದ ಯಾವುದate Windows ಹಕ್ಕೊತ್ತಾಯಗಳ ಕುರಿತು ಕನಿಷ್ಟ ಚರ್ಚೆಗಳೂ ನಡೆದಿಲ ನೀವೇ ಮಾತುಕೊಟ್ಟಿದ್ದ ಸಭೆಗಳೂ ನಡೆದಿಲ್ಲ. ಇವು ಆಚ್ಚರಿಗೂ ಕಾರಣವಾಗಿದೆ.
ದುಡಿಯುವ ಮತ್ತು ದಮನಿತ ಜನವರ್ಗಗಳ ಪ್ರಮುಖ ಹಕ್ಕೊತ್ತಾಯಗಳ ಕುರಿತು ಚರ್ಚಿಸಲು ತಾವು ಕೂಡಲೇ ಮುಂದಾಗಬೇಕು ಮತ್ತು ನಿಮ್ಮ ಸರ್ಕಾರದ ನಿಲುವು ಮತ್ತು ಖಚಿತ ಕ್ರಮಗಳನ್ನು ನವೆಂಬರ್ 27ರಂದು ಮಹಾಧರಣಿಯಲ್ಲಿ ಸೇರಿರುವ ಸಮಸ್ತ ಜನವರ್ಗಗಳ ಮುಂದೆ ಸ್ಪಷ್ಟಪಡಿಸಬೇಕೆಂದು ಕೋರುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ಪಂದನೆಯನ್ನಾಧರಿಸಿ ನವೆಂಬರ್ 28ರಂದು ದುಡಿಯುವ – ದಮನಿತ ಜನರ ಸಂಯುಕ್ತ ಸಮಾವೇಶವು ಮುಂದಿನ ತನ್ನ ರಾಜಕೀಯ ನಿಲುವಿನ ಕುರಿತು ಹಾಗೂ ಹೋರಾಟದ ಸ್ವರೂಪದ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
Key words: three-day -strike – November 26 – rights – working – oppressed.