ಬೆಂಗಳೂರು, ನವೆಂಬರ್,18,2023(www.justkannada.in): ವಿಪಕ್ಷಗಳ ಶಾಸಕರು ಮುಖಂಡರನ್ನ ಸೆಳೆಯುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರನ್ನು ಭೇಟಿಯಾಗಿ ಆಹ್ವಾನವನ್ನ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ಶಾಸಕ ಜಿ.ಟಿ ದೇವೇಗೌಡ, ನಾನು ಕಾಂಗ್ರೆಸ್ ಗೆ ಬರಲ್ಲ ಅಂತಾ ಡಿ.ಕೆ.ಶಿವಕುಮಾರ್ ಗೆ ಹೇಳಿದ್ದೇನೆ ಎಂದಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಜಿಟಿ ದೇವೇಗೌಡ, ಸದಾಶಿವನಗರದಲ್ಲಿ ಡಿಕೆ ಶಿವಕುಮಾರ್ ಅವರೇ ಬಂದು ನನ್ನನ್ನು ಭೇಟಿ ಮಾಡಿದ್ದರು. ಭೇಟಿ ವೇಳೆ ಎಸ್.ಟಿ.ಸೋಮಶೇಖರ್, ಪುಲಿಕೇಶಿ ನಗರ ಶಾಸಕರು, ನೆಲಮಂಗಲ ಶಾಸಕರು ಇದ್ದರು. ಈ ಹಿಂದೆ ಪಕ್ಷಕ್ಕೆ ಕರೆದರೂ ಯಾಕೆ ಬರಲಿಲ್ಲ ಎಂದು ಹೇಳಿದ್ದರು. ಅದೃಷ್ಟ ಇರುವವರಿಗೆ ಅಧಿಕಾರ ಸಿಗುತ್ತೆ, ಇಲ್ಲಂದರೆ ಸಿಗಲ್ಲ ಅಂತ ಹೇಳಿರುವುದಾಗಿ ತಿಳಿಸಿದರು.
ನಾನು ಕಾಂಗ್ರೆಸ್ಗೆ ಹೋಗುವ ಪರಿಸ್ಥಿತಿ ಇಲ್ಲ. ನಾನು ಕಾಂಗ್ರೆಸ್ಗೆ ಬರಲ್ಲ ಅಂತಾ ಡಿ.ಕೆ.ಶಿವಕುಮಾರ್ ಗೆ ಹೇಳಿದ್ದೇನೆ. ಜೆಡಿಎಸ್ನ 19 ಶಾಸಕರೂ ಒಟ್ಟಾಗಿ ಇದ್ದೇವೆ. ಯಾವುದೇ ರೀತಿಯಲ್ಲಿ ಪಕ್ಷವನ್ನು ಒಡೆಯುವ ಕೆಲಸ ಮಾಡಲ್ಲ ಎಂದು ಜಿ.ಟಿ ದೇವೇಗೌಡರು ತಿಳಿಸಿದರು.
Key words: told -DK Shivakumar – will -not j-oin -Congress – MLA -GT Deve Gowda