ಮೈಸೂರು,ನವೆಂಬರ್,20,2020(www.justkannada.in): ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನವೆಂಬರ್ 24 ರಿಂದ ಎರಡು ದಿನಗಳ ಕಾಲ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ನ.24 ಹಾಗೂ 25ರಂದು ಮೈಸೂರು ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಭಾಗಿಯಾಗಲಿದ್ದಾರೆ. ನ.24ರಂದು ಪೊಲೀಸ್ ಆಯುಕ್ತರ ನೂತನ ಕಚೇರಿ ಉದ್ಘಾಟನೆ ಮಾಡಲಿರುವ ಸಿಎಂ ಬಿಎಸ್ ವೈ ಬಳಿಕ ಪೊಲೀಸ್ ಇಲಾಖೆಯ 108 ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ನಂತರ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ರಾತ್ರಿ ಮೈಸೂರಿನಲ್ಲೇ ಸಿಎಂ ಬಿಎಸ್ ವೈ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ನವೆಂಬರ್ 25ರಂದು ಸುತ್ತೂರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಸಿಎಂ ಬಿಎಸ್ ವೈ ಅಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಸುತ್ತೂರು ಗ್ರಾಮದೇವತೆ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಚಾಲನೆ, ಸುತ್ತೂರು ಅತಿಥಿ ಗೃಹ ಹಾಗೂ ಇತರ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಬಳಿಕ ಹೆಲಿಕ್ಯಾಪ್ಟರ್ ಮೂಲಕ ಮುಡುಕುತೊರೆಗೆ ಭೇಟಿ ನೀಡುವ ಸಿಎಂ ಬಿಎಸ್ ಯಡಿಯೂರಪ್ಪ, ಮುಡುಕುತೊರೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ತಲಕಾಡು ಪಂಚಲಿಂಗೇಶ್ವರ ದರ್ಶನ ಸಂಬಂಧ ಸಭೆ ನಡೆಸಿ ಬಳಿಕ ಹೆಲಿಕ್ಯಾಪ್ಟರ್ ನಲ್ಲಿ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
English summary….
CM BSY to tour Mysuru District for two days from Nov. 24
Mysuru, Nov. 20, 2020 (www.justkannada.in): Chief Minister B.S. Yedyurappa will tour Mysuru District from November 24 and 25 and participate in various programmes. He will participate in the inauguration of the newly constructed Office of the Police Commissioner building and lay the foundation stone for construction of the 108 houses by the Police Department.
He will visit Suttur Srikshetra on November 25 and launch various programmes, including laying the foundation stone for construction works of the guest house and other works.
Keywords: CM B.S. Yedyurappa/ Mysuru Tour/ November 25
Key words: Tour -Mysore District – CM BS yeddyurappa -two days –nov 24th.