ಹುಬ್ಬಳ್ಳಿ,ಆಗಸ್ಟ್,12,2024 (www.justkannada.in): ಗ್ಯಾರಂಟಿಗಳಿಗೆ 50ರಿಂದ 60 ಸಾವಿರ ಕೋಟಿ ರೂ. ಹಣ ಖರ್ಚು ಮಾಡುವ ರಾಜ್ಯ ಕಾಂಗ್ರೆಸ್ ಸರ್ಕಾರ ಡ್ಯಾಂಗಳ ನಿರ್ವಹಣೆಗೆ ಯಾಕೆ ಹಣ ಕೊಡಲ್ಲ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿಹೋದ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್, ಇದಕ್ಕೆ ಮೂಲ ಕಾರಣ ರಾಜ್ಯ ಸರ್ಕಾರ. ತುಂಗಭದ್ರಾ ಜಲಾಶಯದಲ್ಲಿ ಇಂಜಿನಿಯರ್ ಗಳೇ ಇಲ್ಲ. ಹಗರಣಕ್ಕೆ ಉತ್ತರ ಕೊಡುವುದರಲ್ಲೇ ಸಮಯ ಕಳೆಯುತ್ತಿದ್ದಾರೆ. ಸರ್ಕಾರ ನಡೆಸಲು ಕಾಂಗ್ರೆಸ್ ನವರು ಆಸಕ್ತಿ ಕಳೆದುಕೊಂಡಿದ್ದಾರೆ. ಜನಾಂದೋಲನ ಜನ ಸೇರಿಸುವುದರಕ್ಕೆ ಸಮಯ ಹೋಗುತ್ತಿದೆ. ಅಭಿವೃದ್ದಿ ಪರ ಕೆಲಸ ಮಾಡಲು ಇವರಿಗೆ ಸಮಯವಿಲ್ಲ ಎಂದು ಟೀಕಿಸಿದರು.
ಸರಿಯಾಗಿ ಡ್ಯಾಂ ನಿರ್ವಹಣೆ ಮಾಡದಿರುವುದು ಇದಕ್ಕೆಲ್ಲ ಕಾರಣ. 6 ತಿಂಗಳ ಹಿಂದೆ ಡ್ಯಾಂನಲ್ಲಿ ನೀರಿಲ್ಲದಿದ್ದಾಗ ನಿರ್ವಹಣೆ ಮಾಡಬೇಕಿತ್ತು. ಪ್ರತಿ ವರ್ಷದ ಡ್ಯಾಂ ನಿರ್ವಹಣೆಗೆ ಹಣ ಖರ್ಚು ಮಾಡುತ್ತಾರೆ. ಜಲಸಂಪನ್ಮೂಲ ಸಚಿವರು ಅಧಿಕಾರಿಗಳ ಜೊತೆ ಮೀಟಿಂಗ್ ಮಾಡಿಲ್ಲ ಸಚಿವರು ಬಂದರು ಊಟಮಾಡಿ ಹೋದ್ರು ಸಿರಿಯಸ್ ಇಲ್ಲ ಎಂದು ಲೇವಡಿ ಮಾಡಿದರು.
ಒಂದು ಬೆಳೆಗೂ ನೀರು ಸಿಗುತ್ತೋ ಇಲ್ವೋ ಎಂಬ ಅನುಮಾನವಿದೆ 40 ಟಿಎಂಸಿ ನೀರು ಕುಡಿಯುವುದಕ್ಕೂ ಸಾಲಲ್ಲ ಎಂದರು.
Key words: Tungabhadra Dam, Crust Gate, Jagdish Shettar