ʼ ಆಫ್ಟರ್‌ ಆಲ್‌ ಕಾನ್ಸ್ಟೇಬಲ್‌ ʼ  ಎಂದು ಹೀಯಾಳಿಸಿದ ಮೇಲಾಧಿಕಾರಿಗೆ ಸೆಡ್ಡು ಹೊಡೆದು  ಐಪಿಎಸ್ ಆದ ಯುವಕ..!

My superior called me deserter': Uday Reddy on reason for working hard to crack UPSCA.

ಬೆಂಗಳೂರು, ಏ.18, 2024  : (www.justkannada.in news ) ‌ ಇತ್ತೀಚಿಗೆ ಯುಪಿಎಸ್ಸಿ ಪರೀಕ್ಷೆ ತೇರ್ಗಡೆ ಹೊಂದಿದ ಪ್ರತಿಭಾವಂತರ ಪೈಕಿ ಬಹುತೇಕರದ್ದು ಕುತೂಹಲ ಕೆರಳಿಸುವ ಹಿನ್ನೆಲೆ. ಬಹುಶಃ, ಚಲನಚಿತ್ರಗಳಲ್ಲಿ  ನೋಡುವಂತೆಯೇ ಈ ಪ್ರತಿಭಾವಂತರ ಜೀವನದ ಹಿನ್ನೆಲೆ ಹೊಂದಿರುವುದು ವಿಶೇಷ.

ಕಡು ಬಡತನದಲ್ಲಿ ವ್ಯಾಸಂಗ ಮಾಡಿ ಯುಪಿಎಸ್ಸಿ ತೇರ್ಗಡೆ ಹೊಂದಿದವರು ಕೆಲವರಾದ್ರೆ, ತರಬೇತಿಯನ್ನೇ ಪಡೆಯದೇ ಪರೀಕ್ಷೆ ಪಾಸು ಮಾಡಿದವರು, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಎದುರಿಸಿ ತೇರ್ಗಡೆಯಾದವರು.. ಹೀಗೆ ಅನೇಕ ಇನ್ಸ್ಪೈರಿಂಗ್‌ ಸ್ಟೋರೀಸ್‌ ಕೇಳಿರುತ್ತೇವೆ.

ಈ ಎಲ್ಲಾ ಘಟನೆಗಳಿಗಿಂತ ಕೊಂಚ ಭಿನ್ನವಾಗಿದೆ ಈ ಯುವಕನ ಸಾಹಸಗಾಥೆ.

ಆಂಧ್ರ ಪ್ರದೇಶದ ಈ ಯುವಕ ಪೊಲೀಸ್‌ ಕಾನ್ಸ್‌ ಸ್ಟೇಬಲ್‌ ಆಗಿದ್ದವರು. ಆದರೆ ಮೇಲಾಧಿಕಾರಿಯ ಉದ್ದೇಶಪೂರ್ವಕ ಕಿರುಕುಳದಿಂದ ಬೇಸತ್ತು, ಹುದ್ದೆಗೆ ರಾಜೀನಾಮೆ ನೀಡಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಇದೀಗ ಯುಪಿಎಸ್ಸಿ ಪರೀಕ್ಷೆಯಲ್ಲಿ 780 ನೇ ರ್ಯಾಂಕ್‌ ಪಡೆದಿದ್ದಾರೆ.

ಇವರ ಹೆಸರು ಉದಯ ರೆಡ್ಡಿ, ತೆಲುಗು ಮಾಧ್ಯಮದಲ್ಲೇ ಶಿಕ್ಷಣ ಪೂರೈಸಿದವರು. ಬಿ.ಎ. ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ಪೊಲೀಸ್‌ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿ ಉದ್ಯೋಗಕ್ಕೆ ಸೇರ್ಪಡೆ. ಇವರು ಕೆಲಸಕ್ಕೆ ಸೇರಿದ ಪೊಲೀಸ್‌ ಠಾಣೆಯ ಮೇಲಾಧಿಕಾರಿಗೆ ಮಾತ್ರ ಯಾಕೋ ಉದಯ ರೆಡ್ಡಿ ಅವರನ್ನು ಕಂಡ್ರೆ ಹೊಟ್ಟೆಕಿಚ್ಚು.  ಆದ್ದರಿಂದಲೇ ವಿನಾಕಾರಣ, ಇವರ ಜತೆ ಕಿರಿಕಿರಿ ಮಾಡುತ್ತಿದ್ದರಂತೆ. ಎಲ್ಲರ ಎದುರು ಅವಮಾನ ಮಾಡುವುದು ಮಾಡುತ್ತಲೇ ಇದ್ದರಂತೆ.

ಒಂದು ದಿನ ಉದಯ್‌ ರೆಡ್ಡಿ, ಯಾವುದೋ ಕಾರಣದಿಂದ ಕರ್ತವ್ಯಕ್ಕೆ ತಡವಾಗಿ ಆಗಮಿಸಿದರು. ಆಗ, ಠಾಣೆ ಮೇಲಾಧಿಕಾರಿ ಇದನ್ನೇ ನೆಪವಾಗಿಟ್ಟುಕೊಂಡು ಉದಯ್‌ ಅವರನ್ನು ಎಲ್ಲರ ಎದುರು ಅವಮಾನ ಮಾಡಿದರು. ನೋಡ್ರೋ ಐಪಿಎಸ್‌ ಆಫೀಸರ್‌ ಬಂದ್ರು , ಹೇಳೋವ್ರೋ, ಕೇಳೋವ್ರು ಯಾರು ಇಲ್ಲ ಎಂದು ಹಂಗಿಸಿದರು.  ನೀನು ಒಬ್ಬ ಆಫ್ಟರ್‌ ಆಲ್‌ ಕಾನ್ಸ್ಟೇಬಲ್…ಎಂದು ಹೀಯಾಳಿಸಿದಾಗ ಉದಯ್‌ ಕಣ್ಣಲ್ಲಿ ನೀರು ಜಿನುಗುತ್ತದೆ.

 

 

ಈ ಘಟನೆಯಿಂದ ತೀರ ಮನನೊಂದ ಉದಯ್‌ ರೆಡ್ಡಿ,  ಕಾನ್ಸ್ಟೇಬಲ್ ಹುದ್ದೆಗೆ ರಾಜೀನಾಮೆ ನೀಡಿ ಅಲ್ಲಿಂದ ಹೊರ ಬರುತ್ತಾರೆ. ಬಳಿಕ, ಸ್ಪರ್ಧಾತ್ಮಕ ಪರೀಕ್ಷೆ ಕಟ್ಟಿ ತೇರ್ಗಡೆ ಹೊಂದುವ ನಿಟ್ಟಿನಲ್ಲಿ ಶ್ರಮ ಹಾಕುತ್ತಾರೆ. ಉದಯ್‌ ರೆಡ್ಡಿ ಶ್ರಮ ಫಲ ನೀಡಿದೆ. ಇದೀಗ ಅವರು ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ಸಿ ತೇರ್ಗಡೆಯಾಗಿದ್ದು,  780 ನೇ ರ್ಯಾಂಕ್‌ ಪಡೆದಿದ್ದಾರೆ.

ಪ್ರಿಲಿಮ್ಸ್‌ ಹಾಗೂ ಮೇನ್ಸ್‌ ಪರೀಕ್ಷೆಗಳನ್ನು ತೆಲುಗು ಭಾಷೆಯಲ್ಲಿ ಎದುರಿಸಿ ತೇರ್ಗಡೆ ಹೊಂದಿದ ಉದಯ್‌ ರೆಡ್ಡಿ, ಇಂಟರ್ವ್ಯೂ ಅನ್ನು ಇಂಗ್ಲಿಷ್‌ ಭಾಷೆಯಲ್ಲಿ ಎದುರಿಸಿದರು.

key words : Uday Reddy, UPSC, Andhra Pradesh, police, constable

 

summary :

My superior called me deserter’: Uday Reddy on reason for working hard to crack UPSCA. after being humiliated by a senior officer in front of 60 policemen, Uday Krishna Reddy resigned from his constable job and studied hard to crack UPSC 2023 exam

Former police constable Uday Krishna Reddy from Andhra Pradesh has secured rank 780 in the highly competitive UPSC civil services examination. For Reddy, the taste of success is made sweeter by the fact that he resigned from his job to prepare for the exam