ಡೆಹ್ರಾಡೂನ್,ಫೆಬ್ರವರಿ,6,2024(www.justkannada.in): ಉತ್ತರಾಖಂಡ್ ವಿಧಾನಸಭೆಯಲ್ಲಿ ಏಕರೂಪ ನಾಗರೀಕ ಸಂಹಿತೆ ಮಸೂದೆಯನ್ನ ಮಂಡನೆ ಮಾಡಲಾಗಿದೆ.
ಎಲ್ಲಾ ನಾಗರಿಕರಿಗೆ ಏಕರೂಪದ ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ಉತ್ತರಾಧಿಕಾರ ಕಾನೂನುಗಳನ್ನು ಪ್ರಸ್ತಾಪಿಸುವ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಮಸೂದೆಯನ್ನು ಉತ್ತರಾಖಂಡ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಈ ಮೂಲಕ ಏಕರೂಪ ನಾಗರೀಕ ಸಂಹಿತೆ ಜಾರಿ ನಿಟ್ಟಿನಲ್ಲಿ ಉತ್ತರಾಖಂಡ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಈ ಏಕರೂಪ ನಾಗರಿಕ ಸಂಹಿತೆಯಲ್ಲಿ ಯಾವುದೇ ಜಾತಿ, ಧರ್ಮ, ಪ್ರಾಂತ್ಯವೆಂಬ ಬೇಧವಿರುವುದಿಲ್ಲ, ದೇಶದ ಸರ್ವರಿಗೂ ಒಂದೇ ಕಾನೂನು ಅನ್ವಯಿಸುತ್ತದೆ. ಇದರ ಅಡಿಯಲ್ಲಿ ವಿವಾಹ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರದ ನಿಯಮಗಳು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಒಂದೇ ಆಗಿರುತ್ತದೆ.
ಈ ಮಸೂದೆಯಿಂದ ಪ್ರಸ್ತುತ ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ವಿವಿಧ ಧರ್ಮಗಳಿಗೆ ಆ ಧರ್ಮದ ವೈಯಕ್ತಿಕ ಕಾನೂನುಗಳಿದ್ದು, ಅವೆಲ್ಲವೂ ಏಕರೂಪ ಕಾಯಿದೆ ಅಡಿಯಲ್ಲಿಯೇ ಇನ್ನುಮುಂದೆ ಬರಲಿವೆ. ಕಳೆದ ಭಾನುವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಉತ್ತರಾಖಂಡ ಸಚಿವ ಸಂಪುಟವು ನಡೆಸಿದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಹಾಗೆಯೇ ಸಚಿವ ಸಂಪುಟ ಮಸೂದೆ ಮಂಡನೆಗೆ ಒಪ್ಪಿಗೆಯನ್ನೂ ನೀಡಿತ್ತು.
Key words: Uniform Civil Code Bill – Uttarakhand-assembly