ಬೆಂಗಳೂರು,ಏಪ್ರಿಲ್,16,2024 (www.justkannada.in): ಕೇಂದ್ರ ಲೋಕಸೇವಾ ಆಯೋಗವು 2023 ರ ಸೆಪ್ಟೆಂಬರ್ 15 ರಿಂದ 24 ರ ನಡುವೆ ನಡೆಸಿದ ನಾಗರೀಕ ಸೇವೆಗಳ ಅಂತಿಮ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು , ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್ ಆಗಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗವು 2023ರಲ್ಲಿ ನಡೆಸಿದ ನಾಗರೀಕ ಸೇವೆಗಳ ಅಂತಿಮ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. 2023ರ ಸೆಪ್ಟೆಂಬರ್ 15, 16, 17, 23 ಮತ್ತು 24ರಂದು ನಡೆದ ಪರೀಕ್ಷೆಗಳಲ್ಲಿ ನಾಗರಿಕ ಸೇವೆಗಳ ಮುಖ್ಯ ಸಂದರ್ಶನ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸೇವಾ ಆಯೋಗವು 2024ರ ಮೊದಲ ಎರಡು ತಿಂಗಳುಗಳಲ್ಲಿ ಸಂದರ್ಶಿಸಿತು.
2023 ಯುಪಿಎಸ್‌ಸಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಇದೀಗ ತಮ್ಮ ಫಲಿತಾಂಶವನ್ನು ಆಯೋಗದ ವೆಬ್‌ಸೈಟ್ https://upsc.gov.in/ ರಿಜಿಸ್ಟರ್ ನಂಬರ್ ಮತ್ತು ಹೆಸರಿನ ಪ್ರಕಾರ ಚೆಕ್ ಮಾಡಿಕೊಳ್ಳಬಹುದಾಗಿದೆ.
ಒಟ್ಟು 1,016 ಅಭ್ಯರ್ಥಿಗಳ ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಯುಪಿಎಸ್ ಸಿ ಪರೀಕ್ಷೆ ಪಾಸ್ ಆದ ಟಾಪರ್ ಗಳ ಹೆಸರು ಈ ಕೆಳಕಂಡಂತಿದೆ.
ಆದಿತ್ಯ ಶ್ರೀವಾಸ್ತವ
ಅನಿಮೇಶ್ ಪ್ರಧಾನ್
ಡೋಣೂರು ಅನನ್ಯಾ ರೆಡ್ಡಿ
ಪಿ ಕೆ ಸಿದ್ಧಾರ್ಥ್ ರಾಮಕುಮಾರ್
ರುಹಾನಿ
ಸೃಷ್ಟಿ ದಾಬಾಸ್
ಅನ್ಮೋಲ್ ರಾಥೋಡ್
ಆಶಿಶ್ ಕುಮಾರ್
ನೌಶೀನ್
ಐಶ್ವರ್ಯಮ್ ಪ್ರಜಾಪತಿ
ಕುಶ್ ಮೋಟ್ವಾನಿ
ಅನಿಕೇತ್ ಶಾಂಡಿಲ್ಯ
ಮೇಧಾ ಆನಂದ್
ಶೌರ್ಯ ಅರೋರಾ
ಕುನಾಲ್ ರಸ್ತೋಗಿ
ಅಯಾನ್ ಜೈನ್
ಸ್ವಾತಿ ಶರ್ಮಾ
ವಾರ್ದಾ ಖಾನ್
ಶಿವಕುಮಾರ್
ಆಕಾಶ್ ವರ್ಮಾ
Key words: UPSC, Result, Announced