ಮೈಸೂರು,ಫೆಬ್ರವರಿ,25,2023(www.justkannada.in): ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಬದುಕಿದ್ದರೂ ಗ್ರಾಮ ಲೆಕ್ಕಿಗನೊಬ್ಬ ಡೆತ್ ಸರ್ಟಿಫಿಕೇಟ್ ನೀಡಿ ಅಕ್ರಮಕ್ಕೆ ಸಾಥ್ ನೀಡಿರುವ ಪ್ರಕರಣ ತಲಕಾಡಿನಲ್ಲಿ ಬೆಳಕಿಗೆ ಬಂದಿದೆ.
ತಲಕಾಡು ಗ್ರಾಮ ಲೆಕ್ಕಿಗ ಪ್ರಶಾಂತ್ ಎಂಬುವವರೇ ಈ ಎಡವಟ್ಟು ಮಾಡಿರುವುದು. ಆಸ್ಪತ್ರೆಯಲ್ಲಿ ಮರಣ ಹೊಂದುವ ಮುನ್ನಾ ದಿನಕ್ಕೆ ಡೆತ್ ಸರ್ಟಿಫಿಕೇಟ್ ನೀಡಿರುವ ವಿ.ಎ.ಪ್ರಶಾಂತ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ವ್ಯಕ್ತಿ ಪುತ್ರ ನರೇಂದ್ರ ಎಂಬುವರು ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ನೀಡಿದ್ದಾರೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಲಕಾಡಿನ ಟಿ.ರಂಗೇಗೌಡ ಎಂಬುವರು 7-12-2018 ರಂದು ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ರಂಗೇಗೌಡ ವರು 8-12-2023 ರಂದು ಮೃತಪಟ್ಟಿದ್ದಾರೆ. ನರೇಂದ್ರ ರವರು ತಮ್ಮ ತಂದೆ ವಿಧಿವಶರಾದ ಹಿನ್ನಲೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಡೆತ್ ಸರ್ಟಿಫಿಕೇಟ್ ಪಡೆದಿದ್ದಾರೆ. ಪಾಲಿಕೆಯಲ್ಲಿ ನೀಡಿದ ಸರ್ಟಿಫಿಕೇಟ್ ನಲ್ಲಿ 8-12-2018 ದಿನಾಂಕ ನಮೂದಾಗಿದೆ. ಆದರೆ ಗ್ರಾಮ ಲೆಕ್ಕಿಗ ಪ್ರಶಾಂತ್ ರವರು ತಲಕಾಡು ನಾಡಕಚೇರಿಯಲ್ಲಿ 7-12-2018 ರಂದೇ ಮೃತಪಟ್ಟಿರುವುದಾಗಿ ಡೆತ್ ಸರ್ಟಿಫಿಕೇಟ್ ನೀಡಿ ಎಡವಟ್ಟಿಗೆ ಕಾರಣರಾಗಿದ್ದಾರೆ.
Key words: VA- death certificate – living –person- Case -filed.