ಬೆಂಗಳೂರು, ಏ.೨೫,೨೦೨೫: ಮಕ್ಕಳನ್ನು ದೊಡ್ಡ ದೊಡ್ಡ ಸಿಟಿಗಳಲ್ಲಿ, ದೊಡ್ಡ ದೊಡ್ಡ ಶೈಕ್ಷಣಿಕ ಸಂಸ್ಥೆಗಳಲ್ಲೇ ಓದಿಸ್ಬೇಕು ಎನ್ನುವ ಮನಸ್ಥಿತಿಗೆ ತೀರ್ಥಹಳ್ಳಿಯ ವಿದ್ಯಾರ್ಥಿನಿ ದೀಕ್ಷಾ ಕೊಟ್ಟ ಉತ್ತರವಿದು.
“ಮರಳಿ ಯತ್ನವ ಮಾಡು ಸಿದ್ಧಿಸುವುದು” ಎಂಬ ಮಾತು ಸುಮ್ಮನೆ ಅಲ್ಲ. ತೀರ್ಥಹಳ್ಳಿಯ ವಾಗ್ದೇವಿ ಪಿಯು ಕಾಲೇಜಿನ ದೀಕ್ಷಾ ಮೊನ್ನೆ ದ್ವಿತೀಯ ಪಿಯು ಫಲಿತಾಂಶದಲ್ಲಿ 600ಕ್ಕೆ 599 ಅಂಕ ಪಡೆದಳು. ಆದರೆ, ಮೊದಲ ಸ್ಥಾನವನ್ನು ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ಅಮೂಲ್ಯ ಕಾಮತ್ (600ಕ್ಕೆ 599) ಜತೆ ಹಂಚಿಕೊಂಡಿದ್ದಳು.
1 ಅಂಕ ಮಿಸ್ಸಾಗೋಕೆ ಚಾನ್ಸೇ ಇಲ್ಲ ಎಂಬ ದೀಕ್ಷಾಳ ಆತ್ಮವಿಶ್ವಾಸ ಕಡೆಗೂ ಗೆದ್ದಿದೆ. ಮಾತ್ರವಲ್ಲದೆ ಆಕೆಯನ್ನು ನಂ.1 ಸ್ಥಾನದಲ್ಲಿ ತಂದು ನಿಲ್ಲಿಸಿದೆ.
ಹೌದು, ಕೆಮಿಸ್ಟ್ರಿಯಲ್ಲಿ ದೀಕ್ಷಾಗೆ ಈ ಮೊದಲು 100ಕ್ಕೆ 99 ಮಾರ್ಕ್ಸ್ ಬಂದಿತ್ತು. ಇದೀಗ, ಮರುಮೌಲ್ಯಮಾಪನದಲ್ಲಿ ಆಕೆಗೆ 100ಕ್ಕೆ 100 ಅಂಕ ಲಭಿಸಿದೆ.
ಒಂದು ಆಟದ ಮೈದಾನವಿಲ್ಲ, ಶಾಲೆಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳ ಚೆಂದದ ಅನುಭವವಿಲ್ಲ. ಆದರೂ ನಮ್ಮ ಮಕ್ಕಳು ಮಹಾಸಿಟಿಗಳಲ್ಲೇ ಓದಬೇಕು ಎನ್ನುವುದು ಕೆಲವೊಮ್ಮೆ ಭ್ರಮೆ. ಎಲ್ಲೋ ಮಹಾನಗರಗಳಲ್ಲಿದ್ದವರಷ್ಟೇ ಅತ್ಯುತ್ತಮ ಕೋಚಿಂಗ್ ಪಡೆದು, ಟಾಪ್ ಡಿಸ್ಟಿಂಕ್ಷನ್ ಪಡೆಯುತ್ತಾರೆ ಎಂಬ ಕಾಲವೂ ಇದಲ್ಲ.
ಮಹಾನಗರಗಳಿಂದ ದೂರದ ಹಳ್ಳಿಯಲ್ಲಿದ್ದೂ, ಪಟ್ಟಣದಲ್ಲಿದ್ದೂ ಆಕಾಶಕ್ಕೆ ಏಣಿ ಹಾಕುವವರ ಸಂಖ್ಯೆ ನಿಧಾನಕ್ಕೆ ಹೆಚ್ಚುತ್ತಿದೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಪ್ರತಿಭೆಗಳ ವಿಕೇಂದ್ರೀಕರಣವೂ ಬಹಳ ಮುಖ್ಯ. ದೀಕ್ಷಾ ಇದನ್ನು ತೋರಿಸಿಕೊಟ್ಟಿದ್ದಾಳೆ.
- ವೈ.ಜಿ.ಅಶೋಕ್.
key words: Re-evaluation, Deeksha, Thirthahalli, topper, PUC
Re-evaluation result: Deeksha from Thirthahalli is now the topper for the state.!