ಬೆಂಗಳೂರು, ಸೆಪ್ಟೆಂಬರ್ 30, 2023 (www.justkannada.in): ನ್ಯೂಯಾರ್ಕ್ ನಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಧಾರಾಕಾರ ಮಳೆಯಿಂದಾಗಿ ನ್ಯೂಯಾರ್ಕ್ ನಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಅಲ್ಲಿನ ಗವರ್ನರ್ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.
ನ್ಯೂಯಾರ್ಕ್ ಮೆಟ್ರೋಪಾಲಿಟನ್ ಪ್ರದೇಶ ಮತ್ತು ಪೂರ್ವ ಕರಾವಳಿಯ ಇತರ ಪ್ರಮುಖ ನಗರಗಳಲ್ಲಿ ಸುಮಾರು 18 ಮಿಲಿಯನ್ ಜನರು ಪ್ರವಾಹ ಎಚ್ಚರಿಕೆ ಅಡಿಯಲ್ಲಿದ್ದಾರೆ.
ನ್ಯೂಯಾರ್ಕ್ ನಲ್ಲಿ ಶುಕ್ರವಾರ 5.08 ಸೆಂ.ಮೀ.ಗಿಂತ ಹೆಚ್ಚು ಮಳೆ ಸುರಿದಿದೆ. ಇದರಿಂದಾಗಿ ನ್ಯೂಯಾರ್ಕ್ ನಗರಕ್ಕೆ ಹಠಾತ್ ಪ್ರವಾಹ ಎಚ್ಚರಿಕೆ ನೀಡಲಾಗಿದೆ.
ಬ್ರೂಕ್ಲಿನ್, ಮ್ಯಾನ್ಹ್ಯಾಟನ್, ಕ್ವೀನ್ಸ್ ಮತ್ತು ನ್ಯೂಜೆರ್ಸಿಯ ಹೊಬೊಕೆನ್ನಲ್ಲಿನ ರಸ್ತೆಗಳು ಮಳೆ ನೀರಿನಲ್ಲಿ ಮುಳುಗಿವೆ. ನ್ಯೂಯಾರ್ಕ್ ನಗರದ ಕಟ್ಟಡಗಳ ನೆಲಮಾಳಿಗೆಗಳಿಗೆ ಮಳೆ ನೀರು ಪ್ರವೇಶಿಸಿದೆ.