ಚಿಕ್ಕಬಳ್ಳಾಪುರ,ಜುಲೈ,13,2021(www.justkannada.in): ಕೊರೋನಾ 2ನೇ ಅಲೆ ಇನ್ನು ಸಂಪೂರ್ಣವಾಗಿ ನಿಂತಿಲ್ಲ. ಹೀಗಾಗಿ ಜನ ಎಚ್ಚರಿಕೆಯಿಂದರಬೇಕು ಒಂದು ವೇಳೆ ಕೊರೋನಾ 3ನೇ ಅಲೆ ಪ್ರಾರಂಭವಾದ್ರೆ ಮತ್ತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಇಂದು ಮಾಧ್ಯಮಗಳ ಮಾತನಾಡಿದ ಸಚಿವ ಸುಧಾಕರ್, ಕೊರೋನಾ 3ನೇ ಅಲೆ ಸಂಬಂಧ ಕಠಿಣಕ್ರಮ ಕೈಗೊಳ್ಳಲಿ ಜನ ಆಸ್ಪದ ಕೊಡಬಾರದು. ಇನ್ನು ಜನರ ನಡವಳಿಕೆ ಮೇಲೆ ನೈಟ್ ಕರ್ಫ್ಯು ತೆರವು ಬಗ್ಗೆ ನಿರ್ಧಾರ. ಮಡಲಾಗುತ್ತದೆ ಎಂದು ತಿಳಿಸಿದರು.
ದೇವರ ಕೃಪೆಯಿಂದ ಕೊವಿಡ್ ಹತೋಟಿಗೆ ಬಂದಿದೆ. ಆದರೆ, ಅದು ಸಂಪೂರ್ಣ ಕಡಿಮೆಯಾಗಿಲ್ಲ. ಹೀಗಾಗಿ ಎಲ್ಲರೂ ಜಾಗೃತೆಯಿಂದ ಇರಿ ಎಂದು ಹೇಳಿದ ಸಚಿವ ಡಾ.ಸುಧಾಕರ್, ಲಸಿಕೆ ವಿತರಣೆಗೆ ವಿಪಕ್ಷಗಳೇ ಅಡ್ಡಿಯಾದವು. ಕೊರೊನಾ ಲಸಿಕೆಯ ಬಗ್ಗೆ ಮೊದಲು ವಿಪಕ್ಷಗಳು ಅಪಹಾಸ್ಯ ಮಾಡಿದ್ದವು. ಅದರಿಂದಾಗಿ ಲಸಿಕೆಯನ್ನು ವೇಗವಾಗಿ ವಿತರಿಸಬೇಕೆಂಬ ಕಾರ್ಯಕ್ಕೆ ತೊಡಕಾಯಿತು ಎಂದು ತಿಳಿಸಿದ್ದಾರೆ.
key words: tough move -again – Corona 3rd wave –start-Minister -Dr K Sudhakar -warns.