ಬೆಂಗಳೂರು, ಅಕ್ಟೊಂಬರ್,04,2020(www.justkannada.in) : ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನಿಶ್ಚಯಿಸಿದಂತೆ ರಾಜೀನಾಮೆ ನೀಡಿದ್ದೇನೆ. ಎಲ್ಲವೂ ನಮ್ಮ ಮೇಲೆ ನಿಂತಿಲ್ಲ. ಕೆಲವೊಂದು ವ್ಯವಸ್ಥೆ ಮೇಲೆ ನಿಂತಿದೆ. ಪಕ್ಷ ಸಂಘಟನೆಗೆ ಮೊದಲ ಆಧ್ಯತೆ ನೀಡಲಾಗುವುದು. ಹೀಗಾಗಿಯೇ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮುಂದಿನ ತೀರ್ಮಾನ ವರಿಷ್ಠರಿಗೆ ಬಿಟ್ಟಿದ್ದು ಎಂದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಿ.ಟಿ.ರವಿ ಅವರು ಸಿಎಂ ಯಡಿಯೂರಪ್ಪ ಅವರಿಗೆ ಶನಿವಾರ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಅಕ್ಟೊಂಬರ್ 2 ಗಾಂಧಿ ಜಯಂತಿಯಂದೇ ಸಿ.ಟಿ.ರವಿ ರಾಜೀನಾಮೆ ನೀಡಲು ನಿರ್ಧರಿಸಿದ್ದರು. ಆದರೆ, ಗಾಂಧಿ ಜಯಂತಿಯಂದು ಸಿಎಂ ಯಡಿಯೂರಪ್ಪ ಸಿಗದ ಕಾರಣ ನಿನ್ನೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸಿ.ಟಿ.ರವಿ ರಾಜೀನಾಮೆ ಸ್ವೀಕಾರ ಬಗ್ಗೆ ಸೋಮವಾರವೇ ನಿರ್ಣಯ ತೆಗೆದುಕೊಳ್ಳಲಾಗುತ್ತದೆ.
ಇನ್ನು ನಾಳೆ ಅಂದರೆ ಸೋಮವಾರ ದೆಹಲಿಗೆ ಪ್ರಯಾಣ ಬೆಳಸಲಿದ್ದು, ರಾಜೀನಾಮೆ ಬಗ್ಗೆ ಹಿರಿಯ ನಾಯಕ ಜೆ.ಪಿ,ನಡ್ಡಾಗೆ ಮಾಹಿತಿ ನೀಡಲಿದ್ದಾರೆ. ಅಕ್ಟೊಂಬರ್ 5, 6ರಂದು ದೆಹಲಿಯಲ್ಲಿ ಪಕ್ಷದ ಸಂಘಟನಾ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಭಾಗವಹಿಸಲಿದ್ದದಾರೆ ಎಂದು ತಿಳಿದು ಬಂದಿದೆ.
key words : Tourism-Minister-C.T.Ravi-resigns-minister