ಮೈಸೂರು, ಜುಲೈ 13, 2020: ಇಂದಿನಿಂದ ವಿಶ್ವಪ್ರಸಿದ್ಧ ಅರಮನೆ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ.
ಮೂರು ದಿನಗಳಿಂದ ಬಂದ್ ಆಗಿದ್ದ ಪ್ಯಾಲೇಸ್ ಅನ್ನು ಇಂದಿನಿಂದ ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಕೋರೋನಾ ದೃಢಪಟ್ಟ ಹಿನ್ನಲೆ ಕಠಿಣ ಕ್ರಮಕೈಗೊಂಡಿದ್ದ ಅರಮನೆ ಆಡಳಿತ ಮಂಡಳಿ ಇದೀಗ ಮತ್ತೆ ಅರಮನೆ ರೀ ಒಪೆನ್ ಮಾಡಿದೆ.
ಒಂಟೆಗಳನ್ನ ನೋಡಿಕೊಳ್ಳುತ್ತಿದ್ದ ಮಗನಿಗೆ ಕೋರೋನಾ ಧೃಡವಾಗಿದ್ದ ಕಾರಣಕ್ಕೆ ಅರಮನೆ ವೀಕ್ಷಣೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿತ್ತು. ಅರಮನೆಯ ಬ್ರಹ್ಮಪುರ ದ್ವಾರದ ಕುದುರೆಮಾಳ ಸಮೀಪದಲ್ಲಿ ವಾಸವಿದ್ದ ಕುಟುಂಬಕ್ಕೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನಿರ್ಭಂಧ ಹೇರಲಾಗಿತ್ತು.
ಮೂರು ದಿನಗಳ ಕಾಲವೂ ಔಷಧಿ ಸಿಂಪಡಣೆ ಕಾರ್ಯ ಮಾಡಲಾಗಿತ್ತು. ಇಂದಿನಿಂದ ಕಾರ್ಯಾರಂಭದ ಬಗ್ಗೆ ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ ಎಸ್ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.