ಮೈಸೂರು,ಅಕ್ಟೋಬರ್,13,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಕೊರೋನಾ ಕಾರ್ಮೋಡದ ನಡುವೆ ಮೈಸೂರು ಅರಮನೆಯಲ್ಲಿ ಸಂಪ್ರದಾಯ ದಸರಾಕ್ಕೆ ಸಕಲ ಸಿದ್ದತೆ ನಡೆಸಲಾಗುತ್ತಿದೆ.
ಅರಮನೆಯಲ್ಲಿ ಅತಿ ಕಡಿಮೆ ಸಿಬ್ಬಂದಿಗಳನ್ನು ಒಳಗೊಂಡಂತೆ ನವರಾತ್ರಿ ತಯಾರಿ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹೆಚ್ಚಾಗಿ ಹರುಡುತ್ತಿರುವ ಹಿನ್ನೆಲೆ ಈ ಬಾರಿ ಶರನವರಾತ್ರಿ ಉತ್ಸವದಲ್ಲಿ ವಿಜೃಂಭಣೆಗೆ ಬ್ರೇಕ್ ಹಾಕಲಾಗಿದ್ದು, ರಾಜವಂಶಸ್ಥರು ಅನೇಕ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಕೈ ಬಿಟ್ಟಿದ್ದಾರೆ.
ಶರವರಾತ್ರಿ ವೇಳೆ ಸಂಪ್ರದಾಯದಂತೆ ಪೂಜೆ ಪುನಸ್ಕಾರ ಮಾತ್ರ ಮಾಡಲು ಚಿಂತನೆ ನಡೆಸಿದ್ದು, ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ನಲ್ಲಿ ಈ ಬಾರಿ 60 ವರ್ಷ ಮೇಲ್ಪಟ್ಟವರಿಗೆ ಪ್ರವೇಶ ಇರುವುದಿಲ್ಲ ಈ ದರ್ಬಾರ್ ನಲ್ಲಿ ಹಸ್ತಾಲಂಘಾನ ನೀಡುವರು, ದರ್ಬಾರ್ ಭಕ್ಷಿಗೂ ಅವಕಾಶ ಇಲ್ಲ. ಅರೋಗ್ಯದ ದೃಷ್ಠಿಯಿಂದ ಈ ಭಾರಿ ರಾಜವಂಶಸ್ಥರು ಈ ರೀತಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಜತೆಗೆ ಖಾಸಗಿ ದರ್ಬಾರ್ ಗೆ ಈ ಬಾರಿ ವಿಶೇಷ ಅತಿಥಿಗಳಿಗೂ ಅಹ್ವಾನ ನೀಡದಿರಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆ ಆಯ್ದ ಅಹ್ವಾನಿತರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಒಂಬತ್ತು ದಿನಗಳ ದಸರಾದಲ್ಲಿ ಭಾಗವಹಿಸುವರಿಗೆ ಕೊರಾನಾ ಟೆಸ್ಟ್ ಮಾಡಿಸಲು ಚಿಂತನೆ ನಡೆಸಿದ್ದು, ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸೂಚನೆ ನೀಡಿದ್ದಾರೆ.
Key words: Traditional Dasara – Palace- Above -60 years – kasagi darbar