ಮೈಸೂರು,ಆ,7,2019(www.justkannada.in): ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಹಾಗೂ ಮಹಾಜನ ಪ್ರಥಮ ದರ್ಜೆ ಕಾಲೇಜಿನ ರೋಟ್ರಾಕ್ಟ್ ಕ್ಲಬ್ ಇವರ ಸಹಯೋಗದೊಂದಿಗೆ ವಿಶೇಷ ಚೇತನರಿಗಾಗಿ ಪಾರಂಪರಿಕ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೈಸೂರಿನ ಪುರಭವನದ ಬಳಿಯಿಂದ ಪ್ರಾರಂಭವಾದ ಪಾರಂಪರಿಕ ಜಾಥಾಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಚಾಲನೆ ನೀಡಿದರು. ಪಾರಂಪರಿಕ ಜಾಥದಲ್ಲಿ ಸುಮಾರು 35ಮಂದಿ ವಿಶೇಷ ಚೇತನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಾಥಾ ಪುರಭವನದಿಂದ ಆರಂಭವಾಗಿ ಸಿಲ್ವರ್ ಜೂಬಿಲಿ, ಕ್ಲಾಕ್ ಟವರ್, ಚಿಕ್ಕಗಡಿಯಾರ, ಕೆ.ಆರ್. ಆಸ್ಪತ್ರೆ, ಸರ್ಕಾರಿ ಆಯುರ್ವೇದ ಕಾಲೇಜು ಮೂಲಕ ಬಂದು ಮೈಸೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಂತ್ಯಗೊಂಡಿತು. ಈ ಸಂದರ್ಭ ಇತಿಹಾಸ ಹಾಗೂ ಪುರಾತತ್ವ ತಜ್ಞ ರಾದ ಪ್ರೊ.ಎನ್.ಎಸ್.ರಂಗರಾಜು, ಈಚನೂರು ಕುಮಾರ್ ಅವರುಗಳು ಮೈಸೂರಿನ ಪಾರಂಪರಿಕ ಕಟ್ಟಡಗಳ ಕಲೆ ಮತ್ತು ವಾಸ್ತುಶಿಲ್ಪ ಹಾಗೂ ಇತಿಹಾಸದ ಕುರಿತು ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
key words: Traditional walk – Mysore – first time- special