ಬೆಂಗಳೂರು, ಡಿಸೆಂಬರ್ 10, 2021 (www.justkannada.in): ವಾಟ್ಸಾಪ್, ಕ್ರಿಪ್ಟೋಕರೆನ್ಸಿ ಪಾವತಿಯ ಪೈಲಟ್ ಪ್ರಾರಂಭಿಸಿದೆ. ಕ್ರಿಪ್ಟೋಕರೆನ್ಸಿಗಳಲ್ಲಿನ ವಹಿವಾಟುಗಳನ್ನ ವಾಟ್ಸಾಪ್ನಲ್ಲಿಯೂ ಮಾಡಬಹುದು.
ಹೌದು. ಇದು ಪ್ರಸ್ತುತ ಪರೀಕ್ಷೆಯ ರೂಪದಲ್ಲಿದ್ದು, ಇದನ್ನು ಸೀಮಿತ ಬಳಕೆದಾರರಿಗಾಗಿ ಹೊರ ತರಲಾಗುತ್ತಿದೆ.
ವಾಟ್ಸಾಪ್ ಚಾಟ್ನಲ್ಲಿಯೇ ಕ್ರಿಪ್ಟೋಕರೆನ್ಸಿ ವಹಿವಾಟಿನ ವೈಶಿಷ್ಟ್ಯವನ್ನು ನೀಡಿದೆ. ಇದಕ್ಕಾಗಿ, ಕಂಪನಿಯು ಮೆಟಾ (ಫೇಸ್ಬುಕ್)ನ ನೋವಿ ಪ್ಲಾಟ್ಫಾರ್ಮ್ ಅನ್ನು ಬಳಸಿದೆ.
ವಾಟ್ಸಾಪ್ ಸಿಇಒ ವಿಲ್ ಕ್ಯಾತ್ಕಾರ್ಟ್ ವಾಟ್ಸಾಪ್ನ ಈ ಹೊಸ ಪೈಲಟ್ ವೈಶಿಷ್ಟ್ಯವನ್ನ ಘೋಷಿಸಿದ್ದಾರೆ. ವಾಟ್ಸಾಪ್ನಲ್ಲಿ ಕ್ರಿಪ್ಟೋಕರೆನ್ಸಿಯನ್ನ ಕಳುಹಿಸುವುದು ಸಾಮಾನ್ಯ ಲಗತ್ತನ್ನ ಕಳುಹಿಸುವಂತೆಯೇ ಇರುತ್ತದೆ.
ಉದಾಹರಣೆಗೆ, ನೀವು ವಾಟ್ಸಾಪ್ನಲ್ಲಿ ಯಾರಿಗಾದರೂ ಫೈಲ್ ಅಥವಾ ಫೋಟೋವನ್ನ ಕಳುಹಿಸುವಂತೆಯೇ, ಕ್ರಿಪ್ಟೋಕರೆನ್ಸಿಗಳನ್ನು ಕಳುಹಿಸಬಹುದು. ಈ ವೈಶಿಷ್ಟ್ಯವನ್ನ ಬಳಸುವುದು ಸಹ ಸುಲಭವಾಗುತ್ತದೆ.