ತುಮಕೂರು,ಫೆಬ್ರವರಿ,14,2021(www.justkannada.in): ಲೂಟಿ ಹೊಡೆದ ಹಣದಿಂದ ಕುತಂತ್ರ ನಡೆಯುತ್ತಿದೆ. ನಿನ್ನೆ ನಡೆದ 41 ಅಧಿಕಾರಿಗಳ ವರ್ಗಾವಣೆಯಲ್ಲೂ ಹಣದ ಆಟ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ತುಮಕೂರಿನಲ್ಲಿ ಇಂದು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಿನ್ನೆ 41 ಅಧಿಕಾರಿಗಳ ವರ್ಗಾವಣೆಯಾಗಿದೆ. ಹೋಲ್ ಸೇಲ್ ವ್ಯಾಪಾರದಂತೆ ಅಧಿಕಾರಿಗಳ ವರ್ಗಾವಣೆಯಾಗಿದೆ. ಪ್ರತಿಪಕ್ಷಗಳು ಇವರ ಜತೆ ಶಾಮೀಲಾಗಿವೆ. ಇಷ್ಟೆಲ್ಲಾ ಅವ್ಯವಹಾರ ನಡೆದಿದೆ. ಇದರಲ್ಲಿ ಪ್ರತಿಪಕ್ಷಗಳಿಗೂ ಪಾಲುದಾರಿಕೆ ಹೋಗಿವೆ. ರಾಜ್ಯದಲ್ಲಿ ವಿರೋಧ ಪಕ್ಷಗಳು ಸತ್ತಿವೆ ಎಂದು ಆಡಳಿತ ಮತ್ತು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಶಿಸ್ತು ಸಮಿತಿ ನೀಡಿರುವ ನೋಟೀಸ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಮಂತ್ರಿಯೊಬ್ಬರು ಹೇಳಿದ್ದಾರೆ. ಸುಮ್ಮನೆ ಹೆದರಿಸಲು ನೋಟಿಸ್ ನೀಡಿದ್ದಾರಂತೆ. ಫೆಬ್ರವರಿ 21ಕ್ಕೆ ಕೇಂದ್ರದವರೇ ನೋಟಿಸ್ ವಾಪಸ್ ಪಡೆಯುತ್ತಾರಂತೆ ಎಂದು ಯತ್ನಾಳ್ ತಿಳಿಸಿದರು.
ಹಾಗೆಯೇ ದೆಹಲಿಯಲ್ಲಿ ಕುಳಿತು ನಮ್ಮ ಸಮುದಾಯದ ಮಂತ್ರಿಯೊಬ್ಬರು ನೋಟಿಸ್ ಕೊಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ನನಗೆ ನೋಟಿಸ್ ಕೊಡಿಸಿದರೇ ಯಾವುದಕ್ಕೂ ನಾನು ಭಯ ಪಡುವುದಿಲ್ಲ ಎಂದರು. ಯಾರು ರಾಜಾಹುಲಿಯಾಗುತ್ತಾರೆ. ಯಾರು ಬೆಟ್ಟದ ಹುಲಿಯಾಗುತ್ತಾರೆ ಎಂದು ಜನರು ತೀರ್ಮಾನ ಮಾಡುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
Key words: Transfer 41 officers – wholesale sales- business-,LA-Basanagowda Patil Yatnal