ಒಂದೇ ಕಡೆ 5 ವರ್ಷ ಸೇವೆ ಪೂರೈಸಿದ ಪೊಲೀಸ್ ಸಿಬ್ಬಂದಿಗಳ ವರ್ಗಾವಣೆಗೆ ಸೂಚನೆ

ಬೆಂಗಳೂರು,ಜುಲೈ,15,2024 (www.justkannada.in):  5 ವರ್ಷಗಳ ಸೇವೆಯನ್ನು ಒಂದೇ ಸ್ಥಳದಲ್ಲಿ ಪೂರೈಸಿರುವ ಪಿ.ಸಿ. ಹೆಚ್.ಸಿ ಮತ್ತು ಎ.ಎಸ್.ಐ ಅವರುಗಳ ವರ್ಗಾವಣೆಗೆ ಸೂಚನೆ ನೀಡಲಾಗಿದೆ.

ಈ ಕುರಿತು ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ ಪೆಕ್ಟರ್ ಜನರಲ್ ಆಫ್ ಪೊಲೀಸ್‌ ನ ವರ ಕಾರ್ಯಾಲಯ ಆದೇಶ ಹೊರಡಿಸಿದೆ.  ಎಲ್ಲಾ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಸಿ, ಹೆಚ್.ಸಿ, ಎಎಸ್‌ ಐ ರವರುಗಳ ಕನಿಷ್ಟ ಮತ್ತು ಗರಿಷ್ಟ ಅವಧಿಯನ್ನು ನಿಗಧಿಪಡಿಸಿ ವರ್ಗಾವಣೆಗಳನ್ನು ಮಾಡಬೇಕೆಂದು ನಿರ್ಧಿಷ್ಟ ಪಡಿಸಲಾಗಿದೆ. ಆದಾಗ್ಯೂ ಹಲವಾರು ಘಟಕಗಳಲ್ಲಿ ಸಿಬ್ಬಂದಿಗಳು ಒಂದೇ ಸ್ಥಳ/ ಠಾಣೆಯಲ್ಲಿ 5 ವರ್ಷಗಳಿಗೂ ಮೇಲ್ಪಟ್ಟು ಕರ್ತವ್ಯ ನಿರ್ವಹಿಸುತ್ತಿರುವುದು ಮತ್ತು ವರ್ಗಾವಣೆ ನಂತರ ಪುನಃ ಅದೇ ಠಾಣೆಗಳಿಗೆ ಓಓಡಿ ಆಧಾರದ ಮೇಲೆ ಸ್ಥಳನಿಯುಕ್ತಿಗೊಳಿಸುತ್ತಿರುವುದು ಕಂಡು ಬಂದಿದೆ.

ಆದ್ದರಿಂದ ದಿನಾಂಕ: 06.07.2024 ರಂದು ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಸೂಚನೆಯನ್ವಯ ತಮ್ಮ ಘಟಕಗಳಲ್ಲಿ ಒಂದೇ ಸ್ಥಳ/ ಠಾಣೆಗಳಲ್ಲಿ 5 ವರ್ಷ ಸೇವೆ ಸಲ್ಲಿಸಿರುವ ಪೊಲೀಸ್ ಕಾನ್ಸ್‌ ಟೇಬಲ್ ಹುದ್ದೆಯಿಂದ ಪೊಲೀಸ್ ಸಬ್ ಇನ್ಸ್‌ಪೆಕ್ಟ‌ರ್ ಹುದ್ದೆಯವರೆಗಿನ ಅಧಿಕಾರಿ/ಸಿಬ್ಬಂದಿಗಳನ್ನು ಕೂಡಲೇ ಬೇರೆ ಠಾಣೆ/ ಸ್ಥಳಗಳಿಗೆ ಬದಲಾವಣೆ ಮಾಡಲು ಮತ್ತು ಯಾವುದೇ ಕಾರಣಕ್ಕೂ ಅಂತಹ ಸಿಬ್ಬಂದಿಗಳನ್ನು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರೆಸತಕ್ಕದ್ದಲ್ಲ ಎಂದು ಈ ಮೂಲಕ ತಿಳಿಸಲಾಗಿದೆ.  ಹಾಗೆಯೇ ಈ ಕುರಿತಂತೆ ಕೈಗೊಂಡ ಕ್ರಮದ ಮಾಹಿತಿಯನ್ನು 7 ದಿನಗಳ ಒಳಗಾಗಿ ಈ ಕಛೇರಿಗೆ ಕಳುಹಿಸುವಂತೆ ಸೂಚಿಸಲಾಗಿದೆ ಎಂದು ಡಿಜಿ&ಐಜಿಪಿ ಆದೇಶದಲ್ಲಿ ತಿಳಿಸಿದ್ದಾರೆ.

Key words: transfer, police, 5 years , service, one place