ವಿಧಾನಸಭೆ ಕಲಾಪದಲ್ಲಿ ಮತ್ತೆ ವರ್ಗಾವಣೆ ದಂಧೆ ಬಗ್ಗೆ ಪ್ರಸ್ತಾಪ: ಸಿಎಂ ಸಿದ್ಧರಾಮಯ್ಯ, ಯತ್ನಾಳ್ ನಡುವೆ ವಾಗ್ವಾದ.

ಬೆಂಗಳೂರು,ಜುಲೈ,11,2023(www.justkannada.in):  ವಿಧಾನಸಭೆ ಕಲಾಪದಲ್ಲಿ ಮತ್ತೆ ವರ್ಗಾವಣೆ ದಂಧೆ ಆರೋಪದ ವಿಚಾರ ಪ್ರಸ್ತಾಪವಾಗಿದ್ದು, ಈ ವೇಳೆ ಸಿಎಂ ಸಿದ್ಧರಾಮಯ್ಯ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವ ವಾಗ್ವಾದ ನಡೆಯಿತು.

ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರ ಸಂಬಂಧ ಸದನದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಐಎಎಸ್  ಕೆಎಎಸ್ ಅಧಿಕಾರಿಗಳ ಬದಲಾಗಿ ನಾನ್ ಕೆಎಎಸ್ ಅಧಿಕಾರಿಗಳನ್ನ ಹಾಕಿದ್ದಾರೆ.   ನಾವು ಅಧಿಕಾರದಲ್ಲಿದ್ದಾಗ  ವರ್ಗಾವಣೆ ದಂಧೆ ಮಾಡಿಲ್ಲ ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಆಗುತ್ತಿದೆ ಎಂದು ಆರೋಪಿಸಿದರು.

ವರ್ಗಾವಣೆ ದಂಧೆ ಆರೋಪಕ್ಕೆ ಸಿಟ್ಟಾದ ಸಿಎಂ ಸಿದ್ಧರಾಮಯ್ಯ, ನೀವು ಮಾತ್ರ ಸತ್ಯಹರಿಶ್ಚಂದ್ರರಾ..? ಎಂದು ಗುಡುಗಿದರು. ಈ ವೇಳೆ  ಕೆಲ ಕಾಲ ಸದನದಲ್ಲಿ ಸಿಎಂ ಸಿದ್ಧರಾಮಯ್ಯ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ವಾಗ್ವಾದ ನಡೆಯಿತು.  ಯತ್ನಾಳ್ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು.

ಬೊಮ್ಮಾಯಿ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಭೈರತಿ ಸುರೇಶ್,  ವ್ಯಾಪಾರ ವಹಿವಾಟು ಮಾಡುವ ಅಭ್ಯಾಸ  ಯತ್ನಾಳ್ ಗೆ ಇರಬಹುದು. ನಿಮ್ಮ ಹತ್ತಿರ ವ್ಯಾಪಾರ ಮಾಡಲು ಬಿಡಬೇಕಾ..? ಎಂದು ಕಿಡಿಕಾರಿದರು. ಈ ವೇಳೆ ಭೈರತಿ ಸುರೇಶ್ ಮಾತಿಗೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಮಾತಿನ ಚಕಮಕಿ   ನಡೆಸಿದರು.

Key words: transfer scam – assembly -Argument –between- CM Siddaramaiah-Yatnal