ಗುಂಪು ಸಂವಹನಕ್ಕೆ ಸಹಕಾರಿ ಈ OHP ಶೀಟ್ ನಿಂದ ತಯಾರಿಸಿದ ಪಾರದರ್ಶಕ ಮಾಸ್ಕ್ ಗಳು.

 

ಮೈಸೂರು, ಮೇ 21, 2020 : (www.justkannada.in news ) ಶ್ರವಣದೋಷವುಳ್ಳವರಿಗೆ ಸಂವಹನ ಸವಾಲು ಮೆಟ್ಟಿ ನಿಲ್ಲಲು ಪೂರಕವಾಗುವಂತೆ ಸೆಮಿ ಟ್ರಾನ್ಸ್ ಪರೆಂಟ್ ಮಾಸ್ಕ್ ಗಳು ಬಳಕೆಗೆ ಬಂದ ಬೆನ್ನಲ್ಲೇ, ಗುಂಪು ಸಂವಹನ ನಡೆಸುವವರ ಅನುಕೂಲಕ್ಕಾಗಿ ಸಂಪೂರ್ಣ ಪಾರದರ್ಶಕ ಮಾಸ್ಕ್ ಬಳಕೆಗೆ ಬಂದಿದೆ.

Overhead Projector (OHP) sheets ಎಂದೇ ಕರೆಯಲ್ಪಡುವ ತೆಳು ಹಾಳೆಗಳ ಸಹಾಯದಿಂದ ಈ ಮಾಸ್ಕ್ ಗಳು ತಯಾರಿಸಲ್ಪಟ್ಟಿದ್ದು, ಇದು ಸಂವಹನ ಸಂದರ್ಭದಲ್ಲಿ ಬಹುಪಯೋಗಿ ಎನ್ನಲಾಗಿದೆ.

 transparent mask-OHP-sheets-helpfull-for-group-discussion-mysore

ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಮೈಸೂರಿನ ‘ ಸಾಫ್ಟ್ ವೇರ್ ಗುರು’ ಕಂಪನಿಯ ಸಂಸ್ಥಾಪಕ ಸಂಜಯ್ ಅಹುಜಾ ಅವರು ಹೇಳಿದಿಷ್ಟು….

ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಧರಿಸುತ್ತಿರುವ ಮಾಸ್ಕ್‌ಗಳು ಸಂವಹನ ಸಮಸ್ಯೆಗೆ ಮೂಲವಾಗಿತ್ತು. ಅದರಲ್ಲೂ ಗುಂಪು ಸಂವಹನ ನಡೆಸುವ ವೇಳೆಯಂತು ಯಾರು ಮಾತನಾಡುತ್ತಿದ್ದಾರೆ, ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯದಂತಾಗಿತ್ತು. ಮಾಸ್ಕ್ ಧರಿಸಿದ್ದರಿಂದ ತುಟಿ ಚಲನೆ ಕಾಣದೆ ಇದ್ದದ್ದೇ ಇದಕ್ಕೆ ಕಾರಣವಾಗಿತ್ತು. ಇದೀಗ ಒ.ಎಚ್.ಪಿ ಹಾಳೆಗಳ ನೆರವಿನಿಂದ ಮಾಸ್ಕ್ ತಯಾರಿ ಧರಿಸುತ್ತಿರುವುದು ಸಮಸ್ಯೆ ನೀಗಿಸಿದೆ. ಜತೆಗೆ ಇದು ಪುನರ್ ಬಳಕೆ ಮಾಡಬಹುದಾಗಿದ್ದು, ದರವು ಸಹ ಕೈಗೆಟಕುವಂತಿದೆ ಎಂದರು.

 transparent mask-OHP-sheets-helpfull-for-group-discussion-mysore

 

key words : transparent mask-OHP-sheets-helpfull-for-group-discussion-mysore