ಬೆಂಗಳೂರು,ಜು,23,2020(www.justkannada.in): ರಾಜ್ಯ ಸರ್ಕಾರದ ವಿರುದ್ದ ಸಿದ್ಧರಾಮಯ್ಯ ಮಾಡಿರುವ ಭ್ರಷ್ಟಾಚಾರ ಆರೋಪ ಸುಳ್ಳು. ನಾನಾವು ಏನು ಖರೀದಿಸಿದ್ದೇವು ಅದು ಪಾರದರ್ಶಕವಾಗಿದೆ. ಆದರೆ ಆತಂಕದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಗೊಂದಲ ಸೃಷ್ಠಿ ಮಾಡುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದರು.
ಕೊರೋನಾ ಕಿಟ್ ಖರೀದಿಯಲ್ಲಿ ರಾಜ್ಯ ಸರ್ಕಾರದ 2 ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದೆ ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪ ಕುರಿತು ಇಂದು ಐದು ಸಚಿವರು ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದರು. ಸಚಿವರಾದ ಆರ್. ಅಶೋಕ್, ಡಿಸಿಎಂ ಅಶ್ವಥ್ ನಾರಾಯಣ್, ಶ್ರೀರಾಮುಲು, ಸುಧಾಕರ್ ಸೇರಿ ಐವರು ಸಚಿವರು ಜಂಟಿ ಸುದ್ಧಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಸರಿಯಾದ ಸಲಹೆ ಸೂಚನೆ ಕೊಡಬೇಕಿದ್ದಂತಹ ಈ ಸಂದರ್ಭದಲ್ಲಿ ಕಾಂಗ್ರೆಸ್ ಇಂತಹ ಆರೋಪ ಮಾಡುತ್ತಿದೆ. ಜನರ ಮನಸ್ಸು ಕೆಡಿಸುವ ಪಿತೂರಿಯನ್ನ ಕಾಂಗ್ರೆಸ್ ಮಾಡುತ್ತಿದೆ. ರಾಜ್ಯವನ್ನ ಲೂಟಿ ಮಾಡಿದಂತಹ ಕಾಂಗ್ರೆಸ್ ಪಕ್ಷ . ಸರಿಯಾದ ದಾಖಲೆ ಇಲ್ಲದೇ ಕೋವಿಡ್ ಸಂದರ್ಭದಲ್ಲಿ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದರು.
ನಾವು ವೆಂಟಿಲೇಟರ್ ಗೆ 18 ಲಕ್ಷ ನೀಡಿರುವುದನ್ನ ಕಾಂಗ್ರೆಸ್ ಪ್ರಶ್ನಿಸುತ್ತಿದೆ. 20019 ಜನವರಿಯಲ್ಲಿ ಚಂದ್ರಲೋಕದಿಂದ ವೆಂಟಿಲೇಟರ್ ನ ಖರೀದಿಸಿದ್ರಾ..? ಅಂದು 46 ವೆಂಟಿಲೇಟರ್ ಖರೀದಿಸಿದ್ದರು. ಪ್ರತಿ ಯುನಿಟ್ ಗೆ 21 ಲಕ್ಷ ನೀಡಿದ್ರು. ಆದರೇ ನಾವು 9 ರಿಂದ 18 ಲಕ್ಷ ನೀಡಿ ಖರೀದಿಸಿದ್ದೇವೆ. ಈಗ ವಿಶ್ವದಲ್ಲೇ ವೆಂಟಿಲೇಟರ್ ಗೆ ಭೇಡಿಕೆ ಇದೆ. ಅವರು ಖರೀದಿಸಿದಾಗ ಬೇಡಿಕೆ ಇರಲಿಲ್ಲ. ನಾವು ಏನು ಖರೀದಿಸಿದ್ದೇವು ಅದು ಪಾರದರ್ಶಕವಾಗಿದೆ. ಅಂದಿನ ಬೇಡಿಕೆಗೆ ಅನುಗುಣವಾಗಿ ಖರೀದಿಸಿದ್ದೇವೆ. ಆದರೆ 50 ವರ್ಷ ರಾಜ್ಯವಾಳಿ ಕಾಂಗ್ರೆಸ್ ನೂರಾರು ಹಗರಣ ಮಾಡಿದೆ. ಕಾಂಗ್ರೆಸ್ ಆತಂಕದ ಪರಿಸ್ಥಿತಿಯಲ್ಲಿ ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದೆ ಎಂದು ಹರಿಹಾಯ್ದರು.
ಡಿಸಿಗಳಿಗೆ 800 ಕೋಟಿ ರೂ ಬಿಡುಗಡೆ ಆರೋಪ ಮಾಡಿದ ವಿಚಾರ ಕುರಿತು ಮಾತನಾಡಿದ ಸಚಿವ ಆರ್.ಅಶೋಕ್, ನಾವು 232 ಕೋಟಿ ರೂ ಬಿಡುಗಡೆ ಮಾಡಿದ್ಧೇವೆ ಎಂದು ಸ್ಪಷ್ಟನೆ ನೀಡಿದರು.
Key words: transparent- Minister- R Ashok-answer -Siddaramaiah’s -allegation