ಬೆಂಗಳೂರು,ಏಪ್ರಿಲ್,12,2021(www.justkannada.in): 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ರಾಜ್ಯದಲ್ಲಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದೆ.
ಸಾರಿಗೆ ನೌಕರರ ಮುಷ್ಕರದ ನಡುವೆಯೂ ರಾಜ್ಯದಲ್ಲಿ ಸರ್ಕಾರ ಬಸ್ ಸಂಚಾರ ಆರಂಭಗೊಂಡಿದ್ದು, ಬೆಳಿಗ್ಗೆ 8 ಗಂಟೆ ವೇಳೆಗೆ ಸುಮಾರು 1282 ಸರ್ಕಾರಿ ಬಸ್ ಗಳು ಕಾರ್ಯಾಚರಣೆ ನಡೆಸಿವೆ.
ಈ ಕುರಿತು ಕೆ ಎಸ್ ಆರ್ ಟಿ ಸಿ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು 8 ಗಂಟೆಯವೇಳೆಗೆ ರಾಜ್ಯಾಧ್ಯಂತ ಕೆಎಸ್ ಆರ್ ಟಿಸಿ 601 ಬಸ್ ಗಳು, ಬಿಎಂಟಿಸಿ 184 ಬಸ್ ಗಳು, ಎನ್ ಇಕೆಆರ್ ಟಿಸಿ 327 ಬಸ್ ಗಳು, ಎನ್ ಡಬ್ಲ್ಯುಕೆಆರ್ ಟಿಸಿ 170 ಬಸ್ ಗಳು ಸೇರಿದಂತೆ ಒಟ್ಟು 1282 ಬಸ್ ಗಳು ಸಂಚಾರ ಆರಂಭಿಸಿರುವುದಾಗಿ ತಿಳಿಸಿದೆ.
ಈ ಮಧ್ಯೆ ಸರ್ಕಾರಿ ಬಸ್ ಗಳು ಕಡಿಮೆ ಸಂಖ್ಯೆಯಲ್ಲಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಯುಗಾದಿ ಹಬ್ಬಕ್ಕೆ ತಮ್ಮ ತಮ್ಮ ಊರುಗಳಿಗೆ ಹೋಗುವ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ENGLISH SUMMARY….
Movement of govt. buses amidst protest
Bengaluru, Apr. 12, 2021 (www.justkannada.in): The Transport Department employees’ indefinite protest against the State Govt. demanding implementation of the sixth pay commission entered into the sixth day today.
However, the movement of government buses started today amidst the ongoing protest. About 1282 government buses started to ply on the roads across the state today at 8 am.
As per KSRTC sources, about 1282 buses including 601 buses from KSRTC, 184 BMTC, 327 NEKRC, 170 NWKRTC have started services from 8 am today. Many people who are eager to go to their native places as there is Ugadi festival tomorrow were found hurrying to catch buses at the KSRTC bus stand in Bengaluru and many places across the State.
Keywords: KSRTC/ buses start service/ 8 am today/ 1282 KSRTC buses starts services/ Transport Department employees protest
Key words: transport employ –strike-Government bus -state