ಬೆಂಗಳೂರು, ಡಿಸೆಂಬರ್,15,2020(www.justkannada.in) ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಾಲ್ಕು ದಿನಗಳ ಕಾಲ ನಡೆಸಿದ ಮುಷ್ಕರದಿಂದ ಸಾರಿಗೆಯ ನಾಲ್ಕು ನಿಗಮಗಳಿಗೆ 58 ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ನಾಲ್ಕು ನಿಗಮಗಳಿಂದ ಒಟ್ಟು 1.30 ಲಕ್ಷ ನೌಕರರಿದ್ದಾರೆ. ರಾಜ್ಯದಲ್ಲಿ 6 ಸಾವಿರ ಕೆಎಸ್ ಆರ್ ಟಿಸಿ ಬಸ್ ಗಳಿದ್ದು ದಿನಕ್ಕೆ 7 ಕೋಟಿ ಕಲೆಕ್ಷನ್ ಆಗುತ್ತಿತ್ತು. ಇನ್ನು ನೌಕರರ ಮುಷ್ಕರದಿಂದಾಗಿ ಕೆಎಸ್ ಆರ್ ಟಿಸಿಗೆ 20 ಕೋಟಿಯಷ್ಟು ನಷ್ಟ ಉಂಟಾಗಿದೆ.
4,900 ರಿಂದ 5 ಸಾವಿರ ಬಿಎಂಟಿಸಿ ಬಸ್ ಗಳು ಬೆಂಗಳೂರಿನಲ್ಲಿ ಸಂಚರಿಸುತ್ತವೆ. ಈ ಮಧ್ಯೆ ಬಿಎಂಟಿಸಿಗೆ ದಿನಕ್ಕೆ 2 ಕೋಟಿ 10 ಲಕ್ಷ ಕಲೆಕ್ಷನ್ ಆಗುತ್ತಿತ್ತು. ಇನ್ನು ನೌಕರರ ನಾಲ್ಕು ದಿನಗಳ ಮುಷ್ಕರದಿಂದ ಬಿಎಂಟಿಸಿಗೆ ಸುಮಾರು 7 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಇನ್ನು NEKRTC ವಿಭಾಗಕ್ಕೆ ದಿನಕ್ಕೆ 4 ಕೋಟಿ ಕಲೆಕ್ಷನ್ ಆಗುತ್ತಿತ್ತು. ಆದರೆ ಮುಷ್ಕರದಿಂದ NEKRTC ಗೆ 12 ಕೋಟಿ ನಷ್ಟ ಉಂಟಾಗಿದೆ ಎನ್ನಲಾಗಿದೆ. ಹಾಗೆಯೇ ಸಾರಿಗೆ ನೌಕರರ ಮುಷ್ಕರದಿಂದಾಗಿ NWKRTC ಗೆ 14 ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ENGLISH SUMMARY…
Transport Dept. employees protest: Know the losses of the 4 transport corporations
Bengaluru, Dec. 15, 2020 (www.justkannada.in): The four transport corporations of the State have incurred a whopping Rs.58 crore loss due to the four-day stir by its employees.
There are a total number of 1.30 lakh employees in the four corporations. There are six thousand KSRTC buses, with a sum of Rs. 7 crore collection per day from these four corporations. The KSRTC has incurred a loss of Rs. 20 crore from this protest.
There are around 5,000 BMTC buses in Bengaluru with a total collection of around Rs. 2.10 crore daily. Thus the BMTC has incurred a sum of Rs. 7 crore loss, it is said.
Likewise, the NEKRTC that was registering a total collection of Rs.4 crore every day has incurred a sum of Rs. 12 crore loss due to the protest. The NWKRTC has incurred Rs.14 crore loss.
Keywords: KSRTC/ Transport Department/ protest/ loss
Key words: Transport- Employees Strike- 4 Corporations – loss.