ಮೈಸೂರು,ಏಪ್ರಿಲ್,10,2021(www.justkannada.in) : ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಮೈಸೂರು ನಗರ ಸಾರಿಗೆ ಹಾಗೂ ಗ್ರಾಮಂತರ ಸಾರಿಗೆ ಸೇರಿದಂತೆ ಹಲವಾರು ನೌಕರಿರಿಗೆ ಏಕಾಏಕಿ ವರ್ಗಾವಣೆ ಮಾಡಲಾಗಿದ್ದು, ನೌಕರರ ಮೇಲೆ ಸರ್ಕಾರ ಹೊಸ ಅಸ್ತ್ರ ಪ್ರಯೋಗಿಸಿದೆ.ಹೋರಾಟದ ಮುಂದಾಳತ್ವದಲ್ಲಿ ಇದ್ದ ಬಹುತೇಕರಿಗೆ ವರ್ಗಾವಣೆ ಬಿಸಿ ತಟ್ಟಿದ್ದು, ವರ್ಗಾವಣೆ ಮಾಡಿರುವ ನೌಕರರಿಗೆ 7 ದಿನಗಳ ಒಳಗೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳವಂತೆ ಆದೇಶ ಹೊರಡಿಸಿದೆ.
ಎರಡು ದಿನದ ಹಿಂದೆ, ಕರ್ತವ್ಯಕ್ಕೆ ಹಾಜರಾಗದಿದ್ದರೆ ವಸತಿ ಗೃಹಗಳಲ್ಲಿರುವ ನೌಕರರು ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಈಗ ಹಲವು ವರ್ಷಗಳಿಂದ ಇಲ್ಲದ ವರ್ಗಾವಣೆ ಮಾಡಿದ್ದು, ಈ ಮೂಲಕ ಸರ್ಕಾರ ಪ್ರತಿಭಟನಕಾರರ ಬೆದರಿಸುವ ಪ್ರಯತ್ನಕ್ಕೆ ಮುಂದಾಗಿದೆ. ನಮ್ಮ ಹೋರಾಟ ಹತ್ತಿಕ್ಕಲು ಅಧಿಕಾರಿಗಳ ಕುತಂತ್ರ ಮಾಡುತ್ತಿದ್ದಾರೆ ಎಂದು ಸಾರಿಗೆ ನೌಕರರು ಅಸಮಾಧಾನವ್ಯಕ್ತಪಡಿಸಿದ್ದಾರೆ.
key words : Transport-Employees-Strike-employees-New-weapon-government