ಬೆಂಗಳೂರು,ಏಪ್ರಿಲ್,8,2021(www.justkannada.in): 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಹೂಡಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಸರ್ಕಾರ ಸೆಡ್ಡು ಹೊಡೆದಿದ್ದು ನಿವೃತ್ತ ಸಿಬ್ಬಂದಿ ಕರೆಸಿ ಬಸ್ ಚಾಲನೆಗೆ ತೀರ್ಮಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ 62 ವರ್ಷ ಮಿರದ ನಿವೃತ್ತ ಸಿಬ್ಬಂದಿಗೆ ಸಾರಿಗೆ ಇಲಾಖೆ ಕರೆ ಕೊಟ್ಟಿದೆ. ಚಾಲಕರಿಗೆ 800 ರೂ, ನಿರ್ವಾಹಕರಿಗೆ 700 ರೂ ಗೌರವಧನ ಫಿಕ್ಸ್ ಮಾಡಲಾಗಿದ್ದು, ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನಿಯೋಜನೆ ಮಾಡಲು ಸರ್ಕಾರ ಮುಂದಾಗಿದೆ.
.ಈ ಸಂಬಂಧ ಕೆಎಸ್ ಆರ್ ಟಿಸಿ ಎಂಡಿ ಶಿವಯೋಗಿ ಕಳಸದ್ ಅವರು ಅಧಿಸೂಚನೆ ಹೊರಡಿಸಿದ್ದಾರೆ ಎನ್ನಲಾಗಿದೆ. ನಿವೃತ್ತ ಚಾಲಕ ಮತ್ತು ನಿವೃತ್ತ ನಿರ್ವಾಹಕರಿಗೆ ನಾಲ್ಕು ನಿಗಮಗಳು ಆಹ್ವಾನ ನೀಡಿವೆ ಎನ್ನಲಾಗಿದೆ. ಈ ಮೂಲಕ ಸರ್ಕಾರ ಸಾರಿಗೆ ನೌಕರರ ಮುಷ್ಕರಕ್ಕೆ ಸೆಡ್ಡು ಹೊಡೆದಿದೆ.
Key words: transport -workers – strike- Government-decision –retired- staff -run – bus.