ಹರಿದ್ವಾರ,ಜೂ,23,2020(www.justkannada.in): ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಕೊರೊನಾ ವೈರಸ್ ಗೆ ವಿಶ್ವದ ಹಲವು ರಾಷ್ಟ್ರಗಳು ಔಷಧ ಕಂಡುಹಿಡಿಯಲು ಪ್ರಯತ್ನ ನಡೆಸುತ್ತಿರುವ ಹೊತ್ತಲ್ಲೇ ಪತಂಜಲಿ ಯೋಗಪೀಠ ಮೊದಲ ಆರ್ಯುವೇದಿಕ್ ಕೊರೊನಾ ಔಷಧ ಕೊರೊನಿಲ್ ನ್ನು ಕಂಡುಹಿಡಿದಿದೆ.
ಈ ಕುರಿತು ಪತಂಜಲಿ ಯೋಗ ಪೀಠದಿಂದ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಯಿತು. ಈ ವೇಳೆ ಮಾತನಾಡಿದ ಬಾಬಾ ರಾಮ್ ದೇವ್, ಕೊರೋನಾ ಸೋಂಕಿಗೆ ಮೊದಲ ಆಯುರ್ವೇದಿಕ್ ಔಷಧಿ ಸಂಶೋಧನೆ ಮಾಡಲಾಗಿದೆ. ತಜ್ಞರು ವೈದ್ಯರು, ವಿಜ್ಞಾನಿಗಳು ಸೇರಿ ಔಷಧ ಸಂಶೋಧನೆ ಮಾಡಿದ್ದಾರೆ. ಕೊರೋನಿಲ್ ಔಷಧಿಯಿಂದ ಕೊರೋನಾಗೆ ಚಿಕಿತ್ಸೆ ನೀಡಬಹುದು ಎಂದು ಪತಂಜಲಿ ಯೋಗ ಪೀಠದ ತಿಳಿಸಿದರು.
280 ಮಂದಿ ಸೋಂಕಿತರ ಮೇಲೆ ಈ ಔಷಧ ಪ್ರಯೋಗಿಸಲಾಗಿದೆ. ಇದರಲ್ಲಿ ಮೂರು ದಿನಗಳಲ್ಲಿ ಶೇ69 ರಷ್ಟು ಸೋಂಕಿತರು ಚೇತರಿಸಿಕೊಂಡಿದ್ದಾರೆ. 7 ದಿನಗಳಲ್ಲಿ ಶೇ.100ರಷ್ಟು ಸೋಂಕಿತರು ಚೇತರಿಸಿಕೊಂಡಿದ್ದಾರೆ. ಹೀಗಾಗಿ ಕೊರೊನಾ ಚಿಕಿತ್ಸೆಗೆ ಕೊರೋನಿಲ್ ಬಳಸಬಹುದು ಎಂದು ರಾಮ್ ದೇವ್ ತಿಳಿಸಿದ್ದಾರೆ.
Key words: Treatment -Corona – Coronel –patanjali-baba ramdev