ಆದಿವಾಸಿಗಳ ಬದುಕು ಪುನಶ್ಚೇತನಗೊಳ್ಳುವ ಕಾರ್ಯಕ್ರಮ ಹೆಚ್ಚು ಬರಲಿ- ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಮಾರ್ಚ್,10,2022(www.justkannada.in): ಬುಡಕಟ್ಟು ಜನಾಂಗದವರು ಸಾಂಪ್ರದಾಯಿಕ ಜ್ಞಾನದ ಶ್ರೀಮಂತ ಪರಂಪರೆಯನ್ನು ಹೊಂದಿದ್ದಾರೆ.  ಶತಮಾನಗಳಿಂದ ಈ ಜ್ಞಾನ ಬಳಸುವ ಮೂಲಕ ಆದಿವಾಸಿಗಳು ಅರಣ್ಯದೊಂದಿಗೆ ನಿಕಟ ಸಂಪರ್ಕ ಪಡೆದುಕೊಂಡಿದ್ದಾರೆ. ಹಾಗಾಗಿ ಅವರ ಬದುಕು ಹಸನುಗೊಳಿಸುವ ಹೆಚ್ಚು ಕಾರ್ಯಕ್ರಮ‌ ಬರಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ನಗರದ ಲಲಿತಾ ಕಲಾ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು ಮತ್ತು ಮೈಸೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ವತಿಯಿಂದ ಕರ್ನಾಟಕ ರಾಜ್ಯದ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ ಪಾತ್ರ ಎಂಬ ವಿಷಯದ ಕುರಿತು ನಡೆದ‌ ಎರಡು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಭಾರತದ ಭೂ ಪ್ರದೇಶದ ಸುಮಾರು ಕಾಲುಭಾಗವನ್ನು ಅಧಿಕೃತವಾಗಿ ಅರಣ್ಯ ಎಂದು ವರ್ಗೀಕರಿಸಲಾಗಿದೆ. ಆದರೆ ಅದರ ಕೇವಲ 12 ಪ್ರತಿಶತದಷ್ಟು ಭೂಮಿಯು ವಾಸ್ತವವಾಗಿ ದಟ್ಟವಾದ ಅರಣ್ಯವನ್ನು ಹೊಂದಿದೆ. ಇವುಗಳಲ್ಲಿ ಕರ್ನಾಟಕದಲ್ಲಿ, ರಾಜ್ಯದಲ್ಲಿ ರೆಕಾರ್ಡೆಡ್ ಫಾರೆಸ್ಟ್ ಏರಿಯಾ (RFA) 38,284 ಚ.ಕಿ.ಮೀ. ಇದರಲ್ಲಿ 28,690 ಚ.ಕಿ.ಮೀ ಮೀಸಲು ಅರಣ್ಯ, 3.931 ಚ.ಕಿ.ಮೀ ಸಂರಕ್ಷಿತ ಅರಣ್ಯ ಮತ್ತು 5,663 ಚ.ಕಿ.ಮೀ ವರ್ಗವಿಲ್ಲದ ಅರಣ್ಯಗಳು ಇವೆ ಎಂದರು.

1ನೇ ಜನವರಿ 2015 ರಿಂದ ಫೆಬ್ರವರಿ 5, 2019 ರ ಅವಧಿಯಲ್ಲಿ, ಅರಣ್ಯ ಸಂರಕ್ಷಣಾ ಕಾಯಿದೆ, 1980 ರ ಅಡಿಯಲ್ಲಿ ಒಟ್ಟು 802.75 ಹೆಕ್ಟೇರ್ ಅರಣ್ಯ ಭೂಮಿಯನ್ನು ವಿವಿಧ ಅರಣ್ಯೇತರ ಉದ್ದೇಶಗಳಿಗಾಗಿ ತಿರುಗಿಸಲಾಗಿದೆ. ಇದು ಸಾಂಪ್ರದಾಯಿಕ ಸಂರಕ್ಷಣಾ ಪದ್ಧತಿಗಳನ್ನು ದುರ್ಬಲಗೊಳಿಸುವುದರ ಜೊತೆಗೆ, ಇದು ಅನೇಕ ಅರಣ್ಯ-ವಾಸಿಸುವ ಸಮುದಾಯಗಳನ್ನು ಅರಣ್ಯ ಸಂಪನ್ಮೂಲಗಳು ಮತ್ತು ಬದುಕುಳಿಯುವ ವಿಧಾನಗಳ ಹಕ್ಕುಗಳನ್ನು ಕಸಿದುಕೊಂಡಿದೆ ಎಂದರು.

ರಾಜ್ಯದಲ್ಲಿ 5 ರಾಷ್ಟ್ರೀಯ ಉದ್ಯಾನವನಗಳು, 30 ವನ್ಯಜೀವಿ ಅಭಯಾರಣ್ಯಗಳು, 15 ಸಂರಕ್ಷಣಾ ಮೀಸಲುಗಳು ಮತ್ತು ಸಮುದಾಯ ಮೀಸಲು ಭೌಗೋಳಿಕ ಪ್ರದೇಶದ 5.33% ರಷ್ಟು ಇದೆ. ಬುಡಕಟ್ಟು ಜನಾಂಗದವರು ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಸಂಬಂಧಿತ ಕೌಶಲ್ಯಗಳು, ಅರಣ್ಯ ಪ್ರಕಾರಗಳು, ಪ್ರಾಣಿಗಳು, ಔಷಧೀಯ ಸಸ್ಯಗಳು ಮತ್ತು ಆರೋಗ್ಯದ ಬಗ್ಗೆ ಬಹಳ ಜ್ಞಾನವನ್ನು ಹೊಂದಿದ್ದಾರೆ. ವಿವಿಧ ಸಂಶೋಧಕರು ಈ ಸಂಬಂಧವನ್ನು ದಾಖಲಿಸಿದ್ದಾರೆ ಎಂದು ಉಲ್ಲೇಖಿಸಿದರು.

ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿದರು. ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಮೈವಿವಿ ಕುಲಸಚಿವ ಪ್ರೊ. ಆರ್.ಶಿವಪ್ಪ, ಕಾನೂನು ವಿಭಾಗದ ಮುಖ್ಯಸ್ಥ ಪ್ರೊ.ರಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Key words: Tribes- mysore university-VC-Prof.G.Hemanth kumar

ENGLISH SUMMARY….

“Tribals possess more traditional knowledge. By using their knowledge, they have understood the forests completely for centuries. More programs should be conducted to make their lives good,” opined Prof. G. Hemanth Kumar, Vice-Chancellor, University of Mysore.
He participated in a two-day workshop on the topic, “Role of Scheduled Tribes and other Traditional Tribals in Conserving the Karnataka State Natural Resources,” organized by the Karnataka State Tribals Research Institute, Mysuru, and the Legal Study Division, of the University of Mysore, held at the Lalitha Kala Rangamandira.
“Nearly one-fourth of the land area in India has been legally bifurcated as forest area. Whereas the thick forest area is only 12% out of it. In Karnataka, the Recorded Forest Area (RFA) is 38,284 sq. m. Out of it 28,690 sq. m. is reserved forest area and 3,931 sq. m. is protected forest area and 5,663 sq. m. is an uncategorized forest area,” he explained.
“An estimated 802.75 hectares of the forest area has been diverted for various other purposes between January 1, 2015, and February 5, 2019, under the Forest (Conservation) Act, 1980. Such diversions not only weaken the traditional conservation systems but also have grabbed away the survival rights, living rights, and rights to use forest resources of the tribal people and other communities that are depending upon forests,” he added.
“There are five national parks, 30 wildlife forests, 15 protected reserved and community reserved forest areas, which form 5.33% of the total geographical area. The tribal have rich knowledge about forests, natural resources, their usage, and related skills, types of forests, wildlife, flora and fauna, medicinal plants and herbs, and their health. Several researchers have also recorded their skills in their research works,” he observed.
Earlier, he inaugurated the two-day workshop. Prof. K.S. Rangappa, former VC, Prof. R. Shivappa, Registrar, University of Mysore, Prof. Ramesh, Head, Law Department, and others were present.