ಮಾಜಿ ಸಿಎಂ ಎಸ್.ಎಂ ಕೃಷ್ಣರಿಗೆ ಗೌರವ ವಂದನೆ:  ಅಂತಿಮ ನಮನ ಸಲ್ಲಿಸಿದ ಗಣ್ಯರು

ಮಂಡ್ಯ,ಡಿಸೆಂಬರ್,11,2024 (www.justkannada.in):  ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಂತ್ಯಕ್ರಿಯೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸ್ವಗ್ರಾಮವಾದ ಸೋಮನಹಳ್ಳಿಯಲ್ಲಿ ನೆರವೇರುತ್ತಿದ್ದು ಅದಕ್ಕೂ ಮುನ್ನ ಸರ್ಕಾರದಿಂದ ಸಕಲ ಗೌರವಗಳೊಂದಿಗೆ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು.

ಮಾಜಿ ಸಿಎಂ SM ಕೃಷ್ಣ ಅವರಿಗೆ ಸರ್ಕಾರದಿಂದ ಗೌರವ ವಂದನೆ ಸಮರ್ಪಿಸಲಾಯಿತು. ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರ ಗೀತೆ ನುಡಿಸಿ ಗೌರವ ನಮನ ಸಲ್ಲಿಸಲಾಯಿತು.

ನಂತರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್  ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಮಾಜಿ ಸಿಎಂ ಬಿಎಸ್ ವೈ, ಬಸವರಾಜ ಬೊಮ್ಮಾಯಿ,  ಸ್ಪೀಕರ್ ಯುಟಿ ಖಾದರ್ ಸೇರಿ ರಾಜಕೀಯ ಗಣ್ಯರು ಪುಷ್ಪಗುಚ್ಚ ಇರಿಸಿ  ಅಂತಿಮ ನಮನ ಸಲ್ಲಿಸಿದರು.

Key words: Tributes, former CM, S.M. Krishna, last respects