ಟ್ರಕ್ಕಿಂಗ್ ದುರಂತ: ಮೃತಪಟ್ಟ ಕರ್ನಾಟಕದ 9 ಚಾರಣಿಗರ ಗುರುತು ಪತ್ತೆ: 13 ಜನರ ರಕ್ಷಣೆ.

ಡೆಹ್ರಾಡೂನ್,ಜೂನ್,6,2024 (www.justkannada.in): ಉತ್ತರಾಖಂಡ್ ನಲ್ಲಿ ಟ್ರಕ್ಕಿಂಗ್ ದುರಂತದಲ್ಲಿ ಸಾವನ್ನಪ್ಪಿರುವ ಕರ್ನಾಟಕದ 9 ಚಾರಣಿಗರ ಗುರುತು ಪತ್ತೆಯಾಗಿದ್ದು ಮೃತಪಟ್ಟವರು ಬೆಂಗಳೂರು ನಿವಾಸಿಗಳು ಎಂದು ತಿಳಿದು ಬಂದಿದೆ.

ಉತ್ತರಕಾಶಿ-ತೆಹ್ರಿ ಜಿಲ್ಲೆಯ ಸಹಸ್ತ್ರತಾಲ್  ನಲ್ಲಿ ಚಾರಣಕ್ಕೆ ತೆರಳಿದ್ದ 22 ಜನರ ಪೈಕಿ 9 ಜನ ಸಾವನ್ನಪ್ಪಿದ್ದು, ನಿನ್ನೆ ಐವರ ಮೃತದೇಹಗಳು ಪತ್ತೆಯಾಗಿತ್ತು, ಇಂದು ನಾಲ್ವರ ಮೃತದೇಹಗಳು ಸಿಕ್ಕಿದ್ದು,  ಮೃತರೆಲ್ಲರೂ ಬೆಂಗಳೂರಿನ ನಿವಾಸಿಗಳೆಂದು ತಿಳಿದು ಬಂದಿದೆ. ಇನ್ನು ಎಸ್‌ಡಿಆರ್‌ಎಫ್ ರಕ್ಷಣಾ ತಂಡದ ಕಾರ್ಯಾಚರಣೆಯಲ್ಲಿ 13 ಜನರನ್ನ ರಕ್ಷಣೆ ಮಾಡಲಾಗಿದೆ.

ಕರ್ನಾಟಕ ಮೂಲದ 19, ಮಹಾರಾಷ್ಟ್ರ ಇಬ್ಬರು ಮತ್ತು ಓರ್ವ ಸ್ಥಳೀಯ ಮಾರ್ಗದರ್ಶಕರು ಸೇರಿ ಒಟ್ಟು 22 ಜನರ ತಂಡ  ಸಹಸ್ತ್ರತಾಲ್ ನಲ್ಲಿ ಟ್ರಕ್ಕಿಂಗ್ ಎಂದು ತೆರಳಿದ್ದರು  ಈ ವೇಳೆ ಹವಾಮಾನ ವೈಪರೀತ್ಯ ಉಂಟಾಗಿ ಅಪಾಯಕ್ಕೆ ಸಿಲುಕಿದ್ದರು.  ಈ ಸಮಯದಲ್ಲಿ ಬೆಂಗಳೂರು ಮೂಲದ 9 ಚಾರಣಿಗರು ಮೃತಪಟ್ಟಿದ್ದಾರೆ.

ಸುಜಾತಾ (51), ವಿನಾಯಕ (54), ಚಿತ್ರಪರಿಣಿತ (48), ಆಶಾ ಸುಧಾಕರ್ (71), ಸಿಂಧೂ (45),  ವೆಂಕಟೇಶ್, ಪಿ.ಕೃಷ್ಣಮೂರ್ತಿ, ಅನಿತಾ ರಂಗಪ್ಪ, ಪದ್ಮಿನಿ ಹೆಗಡೆ ಮೃತಪಟ್ಟವರಾಗಿದ್ದು, ಮೃತದೇಹವನ್ನ ಉತ್ತರ ಕಾಶಿಗೆ ರವಾನಿಸಲಾಗಿದೆ. ಇಂದೇ ಬೆಂಗಳೂರಿಗೆ ಮೃತದೇಹವನ್ನ ಏರ್ ಲಿಫ್ಟ್ ಮಾಡಲಾಗುತ್ತದೆ ಎಂದು ಈಗಾಗಲೇ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಬೆಂಗಳೂರಿನ ಕೆಆರ್ ಪುರಂನ ಶೀನಾ ಲಕ್ಷ್ಮಿ (48), ಸೌಮ್ಯಾ ಕೆ (31), ಹೆಚ್‌ಎಸ್‌ಆರ್ ನಿವಾಸಿ ಶಿವ ಜ್ಯೋತಿ (45), ಗಿರಿ ನಗರ ನಿವಾಸಿ ಜೈ ಪ್ರಕಾಶ್ ವಿಎಸ್ (61), ಹಂಪಿ ನಗರದ ಭರತ್ ವಿ (53), ಜೋಪ್ ನಗರದ ಅನಿಲ್ ಭಟ್ (52), ಮಧು ಕಿರಣ್ ರೆಡ್ಡಿ (52),   ಪ್ರೆಸ್ಟೀಜ್ ಸಿಟಿಯ ವಿನಾಯಕ್ ಎಂ.ಕೆ (47) ಎಸ್‌ ಆರ್‌ ಕೆ ನಗರ ನಿವಾಸಿ ಶ್ರೀರಾಮಲು ಸುಧಾಕರ್ (64), ವಿವೇಕ ಶ್ರೀಧರ್ (37). ಮಹಾರಾಷ್ಟ್ರದ ಸ್ಮೃತಿ ಪ್ರಕಾಶ್ (45) ರಕ್ಷಣೆ ಮಾಡಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಎಚ್ಚತ್ತ ಕರ್ನಾಟಕ ಸರ್ಕಾರ ನಿನ್ನೆಯೇ ಸಚಿವ ಭೈರೇಗೌಡರನ್ನ ಉತ್ತರಖಂಡ್ ಗೆ ಕಳುಹಿಸಿ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಿತ್ತು.

Key words: Trucking, disaster, 9 trekkers, Karnataka, died