ಬೆಂಗಳೂರು,ಮಾರ್ಚ್,23,2021(www.justkannada.in): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸುತ್ತಿದ್ದು ಈ ನಡುವೆ ಕಾಂಗ್ರೆಸ್ ಸದಸ್ಯರು ಸಿಡಿಗಳನ್ನ ಪ್ರದರ್ಶಿಸಿ ವಿಧಾನಸಭೆಯಲ್ಲಿ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, ಎಸ್ ಐಟಿ ತನಿಖೆಯಿಂದ ಸತ್ಯಾಂಶ ಹೊರ ಬರಲ್ಲ ಸಿಡಿ ಕೇಸ್ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿಲ್ಲ. ವಿಚಾರಣೆ ನಡೆಸಿ ಕೇವಲ ವರದಿ ನೀಡಿ ಎಂದಷ್ಟೇ ಹೇಳಿದ್ದಾರೆ. ಇದರಿಂದ ಯಾವುದೇ ಸತ್ಯಾಂಶ ಹೊರಬರಲ್ಲ ಎಂದು ಆರೋಪಿಸಿದರು.

Key words: truth- does not –SIT- investigation- Opposition leader -Siddaramaiah.