ತುಮಕೂರು,ಜನವರಿ,12,2021(www.justkannada.in): ಶಿರಾ ಉಪಚುನಾವಣೆ ವೇಳೆ ಮದಲೂರು ಕೆರೆಗೆ ನೀರು ಹರಿಸುವ ವಿಚಾರವನ್ನೇ ಪ್ರಮುಖ ಅಸ್ತ್ರವನ್ನಾಗಿಟ್ಟುಕೊಂಡು ಬೈಎಲೆಕ್ಷನ್ ನಲ್ಲಿ ಗೆಲುವು ಸಾಧಿಸಿದ ರಾಜ್ಯ ಬಿಜೆಪಿ ಸರ್ಕಾರ ಇದೀಗ ಮದಲೂರು ಕೆರೆಗೆ ನೀರು ಹರಿಸುವುದನ್ನ ಸ್ಥಗಿತಗೊಳಿಸಿದೆ.
ಶಿರಾ ಉಪಚುನಾವಣೆ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ನೀಡಿದ್ದ ಭರವಸೆಯಂತೆ ಕಳೆದ ನವೆಂಬರ್ 30 ರಂದು ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲಾಗಿತ್ತು. ಮದಲೂರು ಕೆರೆಗೆ ನೀರು ಹರಿದು ಬಂದ ಹಿನ್ನೆಲೆ ಬಯಲುಸೀಮೆ ಜನ ಸಂತಸಗೊಂಡಿದ್ದರು.
ಆದರೆ ಇದು 40 ದಿನಕ್ಕೆ ಸೀಮಿತವಾಗಿದ್ದು, ದಿಢೀರೆಂದು ಏಕಾಏಕಿ ಮದಲೂರು ಕೆರೆಗೆ ಹರಿಸಲಾಗುತ್ತಿದ್ದ ಹೇಮಾವತಿ ನೀರನ್ನ ಸ್ಥಗಿತಗೊಳಿಸಲಾಗಿದೆ. ಕೆರೆ ತುಂಬುವ ಮೊದಲೇ ನಾಲೆಯಲ್ಲಿ ನೀರು ಹರಿಯುವುದನ್ನು ಸ್ಥಗಿತಗೊಳಿಸಿರುವುದಕ್ಕೆ ಈ ಭಾಗದ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿದ್ದಾರೆ ಎನ್ನಲಾಗಿದೆ.
Key words: tumakur- shira-Hemavathi -water -breaks – Madalur lake.