ತುಮಕೂರು/ಕೊರಟಗೆರೆ, ಜು.26, 2020 : (www.justkannada.in news) ಕರುನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಸೀಲ್ ಡೌನ್ ಆಗಿ ವಾರ ಕಳೆದರು ಮಾಹಿತಿ ನೀಡದ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರ ಅಸಮಧಾನ.
ಮಹಾಲಕ್ಷ್ಮಿ ದೇವಾಲಯ ಹಿಂಭಾಗದ ಮಾರಮ್ಮನ ಗುಡಿಯ ಅರ್ಚಕರ ಮಡದಿಗೆ ಕೊರೊನಾ ಸೋಂಕು ದೃಡಪಟ್ಟ ಹಿನ್ನಲೆ ದೇವಾಲಯ ಸೀಲ್ ಡೌನ್. ಆದರೆ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡದ ಆಡಳಿತ ಮಂಡಳಿ.
ಪರಿಣಾಮ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿನಿತ್ಯ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರು, ದೇವಿಯ ದರ್ಶನ ಸೀಗದೇ ನಿರಾಶೆಯಿಂದ ಹಿಂದಿರುಗುವಂತಾಗಿದೆ.
ಸೋಂಕಿನಿಂದ, ದೇಗುಲದ ಅರ್ಚಕರ ಮಡದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಆದರೆ ಪ್ರಥಮ ಸಂಪರ್ಕದ ಕುಟುಂಬಸ್ಥರ ಕೊರೊನಾ ವರದಿ ಬರದೇ ಸಮಸ್ಯೆ ಸೃಷ್ಟಿಯಾಗಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಾಲಕ್ಷ್ಮೀ ದರ್ಶನ ಇರುತ್ತಾ ಅಥವಾ ಇರಲ್ವಾ ಎಂಬ ಗೊಂದಲ ಭಕ್ತರನ್ನು ಕಾಡುತ್ತಿದೆ.
ooooo
key words : tumakuru-koratagere-temple-seal.down-mahalakshmi-temple