ತುಮಕೂರು,ಜ,2,2020(www.justkannada.in): ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದು ನನಗೆ ಸಂತಸವಾಗಿದೆ. ಕೆಲ ವರ್ಷಗಳ ಬಳಿಕ ಇಲ್ಲಿಗೆ ಆಗಮಿಸುವ ಸೌಭಾಗ್ಯ ಸಿಕ್ಕಿದೆ. ಆದರೆ ಡಾಶಿವಕುಮಾರ ಶ್ರೀಗಳ ಭೌತಿಕ ಅನುಪಸ್ಥಿತಿ ಕಾಡುತ್ತಿದೆ. ಶ್ರೀಗಳು ಇಲ್ಲವೆಂಬ ಶೂನ್ಯ ಆವರಿಸ್ತಿದೆ ಎಂದು ಪ್ರಧಾನಿ ಮೋದಿ ಶಿವಕುಮಾರ ಶ್ರೀಗಳನ್ನ ನೆನೆದರು.
ತುಮಕೂರಿನ ಸಿದ್ಧಗಂಗಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದ ಬಳಿಕ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿಗೆ ಸಿದ್ಧಲಿಂಗ ಶ್ರೀಗಳು ಶಾಲು ಹೊದಿಸಿ ಹಾರ ಹಾಕಿ ಸನ್ಮಾನ ಮಾಡಿದರು. ಡಾ.ಶಿವಕುಮಾರ ಶ್ರೀಗಳ ಪುತ್ಹಳಿ ನೀಡಿ ಸನ್ಮಾನ ಮಾಡಲಾಯಿತು.
ಬಳಿಕ ವೇದಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತುಮಕೂರಿಗೆ ಆಗಮಿಸಲು ನನಗೆ ಸಂತೋಷವಾಗುತ್ತದೆ. ಮೊದಲು ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಕೆಲ ವರ್ಷಗಳ ಬಳಿಕ ಇಲ್ಲಿಗೆ ಆಗಮಿಸುವ ಸೌಭಾಗ್ಯ ಸಿ ಕ್ಕಿದೆ. ಶ್ರೀಗಳ ಭೌತಿಕ ಅನುಪಸ್ಥಿತಿ ಕಾಡುತ್ತಿದೆ. ಶ್ರೀಗಳು ಇಲ್ಲವೆಂಬ ಶೂನ್ಯ ಆವರೀಸ್ತಿದೆ . ಶ್ರೀಗಳ ದರ್ಶನದಿಂದ ಪ್ರೀತಿ ಸಿಗುತ್ತಿತ್ತು. ಹೊಸ ಅನುಭೂತಿ ಸಿಗುತ್ತಿತ್ತು.ಅವರ ಪ್ರೇರಣೆಯಿಂದ ದಶಕಗಳಿಂದ ಸಮಾಜಸೇವೆ. ವಸ್ತುಸಂಗ್ರಹಾಲಯಕ್ಕೆ ಶಿಲನ್ಯಾಸ ನನ್ನ ಸೌಭಾಗ್ಯ ಎಂದು ನುಡಿದರು.
ಪೇಜಾವರ ಶ್ರೀಗಳನ್ನ ನೆನೆದ ಪ್ರಧಾನಿ ಮೋದಿ..
ಇದೇ ವೇಳೆ ಪೇಜಾವರ ಶ್ರೀಗಳನ್ನ ನೆನೆದ ಪ್ರಧಾನಿ ಮೋದಿ, ಕರ್ನಾಟಕದ ಮತ್ತೊಬ್ಬ ಸಂತ ನಮ್ಮಿಂದ ದೂರವಾಗಿದ್ದಾರೆ. ಪೇಜಾವರ ವಿಶ್ವೇಶ ತೀರ್ಥ ಶ್ರೀಗಳ ನಮ್ಮನ್ನ ಅಗಲಿದ್ದಾರೆ. ಅಗಲಿಕೆಯಿಂದ ಶೂನ್ಯ ಆವರಿಸಿದೆ ಎಂದರು.
ಭಾರತ ನವ ಉತ್ಸಾಹದಿಂದ 21ನೇ ಶತಮಾನಕ್ಕೆ ಕಾಲಿರಿಸಿದೆ. ಇದು ಹೊಸ ಭಾರತದ ಆಕಾಂಕ್ಷೆ. ನವಭಾರತ ನಿರ್ಮಾಣಕ್ಕೆ ಬಲವಾದ ಅಡಿಪಾಯ ಹಾಕಿದ್ದೇವೆ. ದೊಡ್ಡ ಬದಲಾವಣೆಗಾಗಿ ಜನರು ಆಶೀರ್ವಾದಿಸಿದ್ದಾರೆ. ದೇಶವನ್ನ ಬಡತನ ಸಂಕೋಲೆಯಿಂದಮುಕ್ತಗೊಳಿಸೋಣ ಎಂದು ಕರೆ ನೀಡಿದರು.
ಬಯೋತ್ಪಾದನೆ ವಿರುದ್ದ ದೇಶದಲ್ಲಿನ ನೀತಿಯಲ್ಲಿ ಬದಲಾವಣೆ ಮಾಡಿದ್ದೇವೆ. ಜಮ್ಮುಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಮಾಡಿರುವುದು ಇದಕ್ಕೆ ನಿದರ್ಶನ. ರಾಮಮಂದಿರ ನಿರ್ಮಾಣ ಮಾಡುವ ಪ್ರಶಸ್ತ ವಾತಾವರಣ ನಿರ್ಮಾಣ ಮಾಡಲಾಗುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಮೂರು ಸಂಕಲ್ಪಗಳನ್ನ ಮಾಡಲು ಮನವಿ ಮಾಡಿದ ಪ್ರಧಾನಿ ಮೋದಿ….
ಇಂದು ಮೂರು ಸಂಕಲ್ಪಗಳನ್ನ ಮಾಡಲು ಸಹಕಾರ ನೀಡಿ. ಮೊದಲನೆಯದ್ದು ಭಾರತದ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವುದು, ಎರಡನೇಯದ್ದು ಪ್ರಕೃತಿ ಮತ್ತು ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಸಹಕಾರ ನೀಡುವುದು. ಮೂರನೇಯದ್ದು ಜಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಈ ಮೂರು ಸಂಕಲ್ಪಗಳನ್ನ ಮಾಡಬೇಕು ಇದಕ್ಕೆ ಎಲ್ಲಾ ಸಂತರು ಸಹಕರಿಸಿಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.
ಪಾಕ್ ನ 70 ವರ್ಷಗಳ ಕರಾಳ ಕಾರ್ಯದ ವಿರುದ್ದ ಹೋರಾಡಿ.-ಸಿಎಎ ಕುರಿತು ಕಾಂಗ್ರೆಸ್ ವಿರುದ್ದ ವಾಗ್ದಾಳಿ..
ಹಾಗೆಯೇ ಸಿಎಎ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಧರ್ಮದ ಆಧಾರದ ಮೇಳೆ ದಬ್ಬಾಳಿಕೆ ನಡೆಯುತ್ತಿದೆ. ದಬ್ಬಾಳಿಕೆಗೆ ಒಳಗಾದವರು, ದಲಿತರು ಸಿಖ್ ರು ಬೌಧ್ದರು ಭಾರತಕ್ಕೆ ಬರುತ್ತಿದ್ದಾರೆ. ಇಂತವರಿಗೆ ರಕ್ಷಣೆ ನೀಡೋದು ತಪ್ಪಾ..? ಇಂತವರ ರಕ್ಷಣೆಗೆ ಮುಂದಾದರೇ ಕಾಂಗ್ರೆಸ್ ನವರು ಸಹಚರರು ಹೋರಾಡುತ್ತಿದ್ದಾರೆ. ಕೆಲವರು ಸಂಸತ್ ನಿರ್ಣಯದ ವಿರುದ್ದ ಹೋರಾಡುತ್ತಿದ್ದಾರೆ. ನೀವು ಹೋರಾಡುವುದಿದ್ದರೇ ಪಾಕ್ ನಲ್ಲಿ ದಬ್ಬಾಳಿಕೆ ಮಾಡುತ್ತಿರುವವರ ವಿರುದ್ದ ಹೋರಾಟ ಮಾಡಿ. ಪಾಕ್ ನ 70 ವರ್ಷಗಳ ಕರಾಳ ಕಾರ್ಯದ ವಿರುದ್ದ ಹೋರಾಡಿ. ಸಿಎಎ ವಿರುದ್ದವಲ್ಲ ನಿಮ್ಮ ಹೋರಾಟ ಎಂದು ಟಾಂಗ್ ನೀಡಿದರು.
Key words: tumkur- siddaganga math-PM-modi