ಮೈಸೂರು,ಜೂ,3,2020(www.justkannada.in) ಮೈಸೂರು ಜಿಲ್ಲೆ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ 50 ಬುಲೆಟ್ ನಾಪತ್ತೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.
ಕಾನ್ಸ್ ಟೇಬಲ್ ಕೃಷ್ಣೇಗೌಡ ಹೈಡ್ರಾಮಾ ಸೃಷ್ಟಿಸಲು ಹೋಗಿ ಅರೆಸ್ಟ್ ಆಗಿದ್ದಾರೆ. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ 50 ಬುಲೆಟ್ ನಾಪತ್ತೆ ಪ್ರಕರಣದ ಬಗ್ಗೆ ಎಫ್‌ಐಆರ್ ಆಗಿತ್ತು. ರೈಟರ್ ಕೃಷ್ಣೇಗೌಡನನ್ನು ಅಮಾನತು ಮಾಡಿ ಎಸ್.ಪಿ ಆದೇಶ ಹೊರಡಿಸಿದ್ದರು.
ಅಮಾನತು ಆದೇಶದ ಬೆನ್ನಲ್ಲೇ ಕೃಷ್ಣೇಗೌಡ ಆತ್ಮಹತ್ಯೆ ನಾಟಕವಾಡಿದ್ದಾರೆ. ಹೌದು ಕೃಷ್ಣೇಗೌಡ ಬೈಕ್‌ನಲ್ಲಿ ತಿ.ನರಸೀಪುರ ತಾಲೂಕಿನ ಮನ್ನೇಹುಂಡಿ ಗ್ರಾಮಕ್ಕೆ ಆಗಮಿಸಿ ಅಲ್ಲಿ ನದಿ ದಡದ ಮೇಲೆ ಯೂನಿಫಾರ್ಮ್ ಬಿಚ್ಚಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನದಿಗೆ ಹಾರಿದ್ದಾರೆ. ನಂತರ ಅರೆಬೆತ್ತಲಾಗಿ ಮತ್ತೊಂದು ದಡಕ್ಕೆ ತಲುಪಿ ಸಂಬಂಧಿಕರಿಗೆ ಕಾರು ತರುವಂತೆ ಕಾಲ್ ಮಾಡಿದ್ದರು.
ಇನ್ನು ಕೃಷ್ನೇಗೌಡನ ವರ್ತನೆ ಕಂಡು ಅಲ್ಲಿನ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಡಿವೈಎಸ್‌ಪಿ ಪ್ರಭಾಕರ್ ಸಿಂಧೆ, ಸಿಪಿಐ ಎಂ.ಆರ್.ಲವ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದೀಗ ಕೃಷ್ಣೇಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಮೂಲಕ ತಾನು ತೋಡಿದ ಬಾವಿಗೆ ಕಾನ್ಸ್ ಟೇಬಲ್ ಕೃಷ್ಣೇಗೌಡ ತಾನೇ ಬಿದ್ದಂತಾಗಿದೆ.
Key words: Twist-bullet –missing- case –mysore- T.Narasipur-police station-Arrest -Constable.