ಫುಡ್ ಪಾಯ್ಸನ್ ಪ್ರಕರಣಕ್ಕೆ ಟ್ವಿಸ್ಟ್: ಗೃಹಪ್ರವೇಶದ ಊಟ ಮಾಡದವರೂ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಮೈಸೂರು,ಜೂನ್,3,2024 (www.justkannada.in): ಮೈಸೂರಿನ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಓರ್ವ ಯುವಕ ಸಾವನ್ನಪ್ಪಿ ಹಲವು ಮಂದಿ ಅಸ್ವಸ್ಥರಾಗಿದ್ದ ಘಟನೆ ಮಾಸುವ ಮುನ್ನವೇ ಇದೀಗ ಅಂತಹದೊಂದು ಮೈಸೂರು ತಾಲೂಕಿನ ಮಾರ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದಿರುವ ಫುಡ್ ಪಾಯ್ಸನ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು,  ಮೈಸೂರು ತಾಲೂಕಿನ ಮಾರ್ಬಳ್ಳಿ ಗ್ರಾಮದಲ್ಲಿ ಗೃಹ ಪ್ರವೇಶದಲ್ಲಿ ಊಟ ಮಾಡದವರಿಗೂ ವಾಂತಿ  ಭೇದಿ ಕಾಣಿಸಿಕೊಂಡಿದೆ.   ಒಂದೇ ಗ್ರಾಮದ 50 ಕ್ಕು ಹೆಚ್ಚು ಜನರು ಅಸ್ವಸ್ಥರಾಗಿದ್ದು, 30ಕ್ಕೂ  ಹೆಚ್ಚು ಜನರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಶುಕ್ರವಾರ ಗ್ರಾಮದಲ್ಲಿ ಗೃಹ ಪ್ರವೇಶ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ಸುಮಾರು 300 ಕ್ಕು ಹೆಚ್ಚು ಜನರು ಊಟ ಮಾಡಿದ್ದರು.  ಮಾರ್ಬಳ್ಳಿ ಹೊರತು ಪಡಿಸಿ ಬೇರೆ ಗ್ರಾಮದಿಂದಲೂ ಜನರು‌ ಬಂದಿದ್ದರು. ಬೇರೆ ಗ್ರಾಮದ ಯಾರಲ್ಲೂ ಲಕ್ಷಣ ಕಾಣಿಸಿಕೊಂಡಿಲ್ಲ.  ಇದನ್ನು ಹೊರತು ಪಡಿಸಿ ಅದೇ ಗ್ರಾಮದ ಊಟ ಸೇವಿಸದ ಹಲವು ಜನರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಮೈಸೂರಿನ ಕೆ.ಸಾಲುಂಡಿ, ತಗಡೂರು ಬಳಿಕ ಮತ್ತೊಂದು ಗ್ರಾಮದಲ್ಲಿ ಆತಂಕವನ್ನುಂಟು ಮಾಡಿದೆ. ಇಷ್ಟೆಲ್ಲಾ ಪ್ರಕರಣಗಳು ನಡೆದರೂ ಸಿಎಂ  ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದರೂ ಸಹ ಆರೋಗ್ಯ ಇಲಾಖೆ‌‌ ಎಚ್ಚೆತ್ತುಕೊಂಡಿಲ್ಲವೇ ಎಂಬ ಪ್ರಶ್ನೆ ಉದ್ಬವಿಸಿದೆ.

Key words:  twist, food poisoning, case, mysore