ರಾಯಚೂರು, ಅಗಸ್ಟ್, 15,2024 (www.justkannada.in): ಹೊಲದ ಬದುವಿಗೆ ಹಾಕಿದ್ದ ಬಂಡೆ ಉರುಳಿಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘೋರ ದುರಂತ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡೂರು ತಾಂಡಾದಲ್ಲಿ ಈ ದುರ್ಘಟನೆ ನಡೆದಿದೆ. ಮಂಜುನಾಥ್ (9), ವೈಶಾಲಿ(8) ಮೃತಪಟ್ಟ ಮಕ್ಕಳು. ಇನ್ನು ಘಟನೆಯಲ್ಲಿ ಓರ್ವ ಮಗುವಿನ ಕಾಲು ಮುರಿದಿದ್ದು, ಸದ್ಯ ಗಾಯಾಳು ಮಗುವಿಗೆ ಲಿಂಗಸಗೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಾಲೆಗೆ ದಸರಾ ರಜೆ ಹಿನ್ನೆಲೆಯಲ್ಲಿ ಮೂವರು ಮಕ್ಕಳು ಪೋಷಕರ ಜೊತೆಗೆ ಜಮೀನಿಗೆ ಹೋಗಿದ್ದರು. ಈ ವೇಳೆ ಜಮೀನಿನ ಬದುವಿನಲ್ಲಿ ಹಾಕಲಾಗಿದ್ದ ಕಲ್ಲು ಬಂಡೆಗಳ ಸುತ್ತಮುತ್ತ ಮಕ್ಕಳು ಆಟವಾಡುತ್ತಿದ್ದರು. ಈ ಸಮಯದಲ್ಲಿ ಕಲ್ಲು ಬಂಡೆ ಜಾರಿ ಬಿದ್ದು ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ.
Key words: Two children, death, rock fall, Raichur