ಮೈಸೂರು,ಆಗಸ್ಟ್,2,2023(www.justkannada.in): ಮೈಸೂರಿನ ಸಿಎಫ್ ಟಿಆರ್ ಐ(CFTRI)ನಲ್ಲಿ ಪೇಪರ್ ವಸ್ತುಗಳ ಬಳಕೆ ಬಗ್ಗೆ ನಾಳೆಯಿಂದ ಎರಡು ದಿನಗಳ ಸೆಮಿನಾರ್ ಆಯೋಜನೆ ಮಾಡಲಾಗಿದೆ.
ನಾಳೆ ಬೆಳಗ್ಗೆ CFTRI ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಸೆಮಿನಾರ್ ಅನ್ನು ರಾಜವಂಶಸ್ಥ ಯದುವೀರ್ ಉದ್ಘಾಟನೆ ಮಾಡಲಿದ್ದಾರೆ. ಸುಮಾರು 350 ಮಂದಿ ತಂತ್ರಜ್ಞರು ಭಾಗಿಯಾಗುವ ಸಾಧ್ಯತೆ ಇದೆ.
ಆಹಾರ ಪ್ಯಾಕೇಜಿಂಗ್ ಗೆ ಒಂದೇ ಬಾರಿ ಬಳಸುವ ಪ್ಲಾಸ್ಟಿಕ್ ಅನ್ನು ಕಾಗದದಿಂದ ಬದಲಾಯಿಸುವುದರ ಬಗ್ಗೆ ವಿಚಾರ ಸಂಕಿರಣ ನಡೆಯಲಿದ್ದು ಈ ಕುರಿತು ವಿದ್ವಾಂಸರು, ಇಂಜಿನಿಯರ್ ಗಳು ಹಾಗೂ ತಂತ್ರಜ್ಞರು ವಿಚಾರ ಮಂಡಿಸಲಿದ್ದಾರೆ. ದೇಶದ ವಿವಿಧ ಭಾಗಗಳ ತಂತ್ರಜ್ಞರು ಪಾಲ್ಗೊಂಡು ವಿಚಾರ ಮಂಡನೆ ಮಾಡಲಿದ್ದಾರೆ.
ಪೇಪರ್ ನ ಬಳಕೆ ಹಾಗೂ ಪುನರ್ ಬಳಕೆಯ ವಸ್ತುಗಳೊಂದಿಗೆ ಪೇಪರ್ ತಯಾರಿಕೆ ಸೇರಿದಂತೆ ವಿಧಾನದ ಬಗ್ಗೆ ಸೆಮಿನಾರ್ ನಲ್ಲಿ ಚರ್ಚೆಯಾಗಲಿದೆ ಎಂದು ಸುದ್ದಿಗೋಷ್ಟಿಯಲ್ಲಿ CFTRI ನ ಅಧ್ಯಕ್ಷೆ ಡಾ ಶ್ರೀದೇವಿ ಅನ್ನಪೂರ್ಣ ಸಿಂಗ್ ಹಾಗೂ ಇತರೆ ಪ್ರಮುಖರು ಮಾಹಿತಿ ನೀಡಿದರು.
Key words: Two day –seminar- organized – CFTRI – usage – paper materials.