ಬೆಂಗಳೂರು, ಮೇ 19, 2020 (www.justkannada.in): ಲಾಲ್ ಬಾಗ್ ಓಪನ್ ಆಗುತ್ತಿದ್ದಂತೆ ಸಾರ್ವಜನಿಕರು ಸಸ್ಯಕಾಶಿಯ ಅಂದವನ್ನು ಸವಿಯಲು ಧಾವಿಸಿ ಬಂದರು. ಲಾಕ್ ಡೌನ್ ನಡುವೆ ತೆರದ ಸಸ್ಯಕಾಶಿ ಪ್ರವೇಶಕ್ಕೂ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು.
ಹೌದು. ಭಾರತ ಲಾಕ್ ಡೌನ್ ನಿಂದ ಮನೆಯಲ್ಲೇ ಕುಳಿತು ರೋಸಿ ಹೋಗಿದ್ದ ಬೆಂಗಳೂರಿಗರು ಪಾರ್ಕ್ ಗಳತ್ತ ಮುಖ ಮಾಡಿದ್ದಾರೆ. ಸಿಲಿಕಾನ್ ಸಿಟಿ ಸಸ್ಯಕಾಶಿ ಲಾಲ್ ಬಾಗ್ ಗೆ ಭೇಟಿ ನೀಡುತ್ತಿದ್ದಾರೆ.
ಬೆಂಗಳೂರಿನ ಲಾಲ್ ಬಾಗ್ ಪ್ರವೇಶಿಸಬೇಕೆಂದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಬೇಕು. ಫಿವರ್ ಚೆಕ್ ಮಾಡಿ, ಸ್ಯಾನಿಟೈಸರ್ ನೀಡಿ ಲಾಲ್ ಬಾಗ್ ಒಳಗೆ ಪ್ರವೇಶ ನೀಡಲಾಗುತ್ತಿದೆ. 2 ತಿಂಗಳ ಬಳಿಕ ಸಸ್ಯಕಾಶಿಯಲ್ಲಿ ಸಾರ್ವಜನಿಕರು ವಾಕ್ ಮಾಡಿದರು.