ಮೈಸೂರ,ಅಕ್ಟೋಬರ್,1,2024 (www.justkannada.in): ಈ ಬಾರಿ ಮೈಸೂರು ದಸರಾ ಮಹೋತ್ಸವಕ್ಕೆ ಎರಡು ಹಂತದ ಭದ್ರತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದರು.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ ಪೋಲಿಸ್ ಇಲಾಖೆ ಕೈಗೊಂಡಿರುವ ಭದ್ರತೆ ಕುರಿತು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಈ ಬಾರಿಯ ದಸರಾ ಮಹೋತ್ಸವಕ್ಕೆ ಎರಡು ಹಂತದ ಭದ್ರತೆ ವ್ಯವಸ್ಥೆ ಮಾಡಲಾಗುತ್ತಿದ್ದು, ಒಂದನೇ ಹಂತದಲ್ಲಿ 16 ಎಸ್ ಪಿ, 599 ಇತರೆ ಪೊಲೀಸ್ ಅಧಿಕಾರಿಗಳು, 2381 ಸಿಬ್ಬಂದಿಗಳು ನಿಯೋಜನೆ ಮಾಡಲಾಗುತ್ತಿದೆ. 2ನೇ ಹಂತದಲ್ಲಿ ಇಬ್ಬರು ಡಿಐಜಿ, 27 ಎಸ್ ಪಿ, 989 ಇತರೆ ಪೊಲೀಸ್ ಅಧಿಕಾರಿಗಳು, 3981 ಸಿಬ್ಬಂದಿಗಳು ನಿಯೋಜನೆ ಮಾಡಲಾಗುತ್ತದೆ 10 ಸಿಎಆರ್, 33 ಕೆಎಸ್ ಆರ್ ಪಿ, 29 ಎಎಸ್ ಸಿ, 3 ಬಿಡಿಡಿಎಸ್, ಒಂದು ಗರುಡ ಪಡೆ, ಒಂದು ಐಎಸ್ ಡಿ/ಸಿಐಇಡಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಅಕ್ಟೋಬರ್ 3ರಿಂದ 12ರವರೆಗೆ ಹಲವೆಡೆ ಸಂಚಾರ ಮಾರ್ಗ ನಿರ್ಬಂಧ ವಿಧಿಸಲಾಗಿದೆ. ಬದಲಿ ಮಾರ್ಗದ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಒಟ್ಟು 10 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ಹಾಗೆಯೇ ಮೈಸೂರಿನ ನಾಲ್ಕು ಸ್ಥಳಗಳಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.
Key words: Two-phase security, Mysore Dasara, Police Commissioner, Seema Lotkar