ಬೆಂಗಳೂರು,ಅಕ್ಟೋಬರ್,30,2020(www.justkannada.in): ಆಟವಾಡುತ್ತಿದ್ದ ವೇಳೆ ಲಿಫ್ಟ್ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಕೆಂಗೇರಿಯ ಕೋಡಿಪಾಳ್ಯದಲ್ಲಿ ಈ ಘಟನೆ ನಡೆದಿದೆ. ಉತ್ತರ ಕರ್ನಾಟಕ ಮೂಲದ ದಂಪತಿಯ ಪುತ್ರ ವಿನೋದ್(2) ಮೃತಪಟ್ಟ ಮಗು. ರಮೇಶ್ ಎಂಬುವವರ ಮಾಲೀಕತ್ವದ ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗೆ ಬಿದ್ದು ಮಗು ಸಾವನ್ನಪ್ಪಿದೆ.
ಆಟವಾಡುತ್ತಿದ್ದ ವೇಳೆ ವಿನೋದ್ ಲಿಫ್ಟ್ನ ಗುಂಡಿಗೆ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡ ವಿನೋದ್ ನನ್ನ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಈ ಕುರಿತು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Two-year-old- baby -dies – falling – lift