ಐಪಿಎಲ್ ಆಯೋಜನೆಗೆ ಯುಎಇ ಉತ್ಸುಕತೆ

ಮುಂಬೈ, ಜೂನ್ 07, 2020 (www.justkannada.in): ಭಾರತದ ಹೊರಗೆ ಐಪಿಎಲ್ ನಡೆಸುವುದಾದರೆ ನಾವು ರೆಡಿ ಎಂದು ಯುಎಇ ಹೇಳಿದೆ.

ಅಕ್ಟೋಬರ್ ನಲ್ಲಿ ಟಿ20 ವಿಶ್ವಕಪ್ ನಡೆಯಬೇಕಿದೆ. ಒಂದು ವೇಳೆ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಈ ಕೂಟ ಮುಂದೂಡಿಕೆಯಾದರೆ ಐಪಿಎಲ್ ನಡೆಯುವುದು ನಿಶ್ಚಿತ ಎನ್ನಲಾಗಿದೆ. ಜೂನ್ 10ರಂದು ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ.

ಒಂದು ವೇಳೆ ಭಾರತದ ಹೊರಗೆ ಐಪಿಎಲ್ ನಡೆಸಲು ಉತ್ಸುಕವಾದರೆ, ಆತಿಥ್ಯ ವಹಿಸಿಕೊಳ್ಳಲು ನಾವು ಸಿದ್ದರಿದ್ದೇವೆ ಎಂದು ಯುಎಇ ಕ್ರಿಕೆಟ್ ಬೋರ್ಡ್ ಹೇಳಿದೆ. ಬೋರ್ಡ್ ನ ಕಾರ್ಯದರ್ಶಿ ಮುಬಾಶ್ಶಿರ್ ಉಸ್ಮಾನಿಯವರ ಮಾತನ್ನು ಗಲ್ಫ್ ನ್ಯೂಸ್ ಪತ್ರಿಕೆ ಪ್ರಕಟಿಸಿದೆ.