ಮೈಸೂರು, ಫೆ.೧೩,೨೦೨೫: ಉದಯಗಿರಿ ಪೋಲಿಸ್ ಠಾಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಭೇಟಿ. ಪೋಲಿಸ್ ಠಾಣೆಗೆ ಕಲ್ಲು ತೂರಾಟ ಪ್ರಕರಣ ಹಿನ್ನೆಲೆ. ಪೋಲಿಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದ ಸಚಿವ ಡಾ.ಎಚ್ಸಿಎಂ.
ಪೋಲಿಸ್ ಅಧಿಕಾರಿಗಳೊಂದಿಗೆ ಮಾತುಕತೆ. ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಪೋಲಿಸ್ ಕಮಿಷನರ್ ಸೀಮಾ ಲಾಟ್ಕರ್,ಡಿಸಿಪಿಗಳಾದ ಮುತ್ತುರಾಜ್,ಜಾಹ್ನವಿ ಸೇರಿದಂತೆ ಇತರೆ ಅಧಿಕಾರಿಗಳ ಜೊತೆ ಮಾತುಕತೆ. ಬಳಿಕ ಮಾಧ್ಯಮದ ಜತೆ ಮಾತನಾಡಿದ ಸಚಿವ ಡಾ.ಮಹಾದೇವಪ್ಪ ಹೇಳಿದಿಷ್ಟು..
ಉದಯಗಿರಿ ಕಲ್ಲು ತೂರಾಟ ಪ್ರಕರಣ, ಮೊಬೈಲ್ ನಿಂದ ಮೊಬೈಲ್ ಗೆ ಒಂದು ಪೋಸ್ಟ್ ಶೇರ್ ಆಗಿದೆ ಈ ವಿಷಯ ಎಲ್ಲರಿಗೂ ಗೊತ್ತಾಗಿದೆ. ಪೋಸ್ಟ್ ಬಗ್ಗೆ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸ್ ಕ್ರಮಕ್ಕೆ ಹಿರಿಯರು ಒಪ್ಪಿಗೆ ಸೂಚಿಸಿದ್ದರು. ಆದ್ರೆ ಕೆಲವ್ರು ಕಲ್ಲು ತೂರಾಟ ಮಾಡಿ ಕಿಡಿಗೇಡಿತನ ಮೇರೆದಿದ್ದಾರೆ. ತಪ್ಪು ಮಾಡಿದವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನು ಕೆಲವರ ಪತ್ತೆಗೆ ತನಿಖೆ ಮಾಡುತ್ತಿದ್ದಾರೆ. ಕಾನೂನು ಭಂಗ ಉಂಟು ಮಾಡಿದವರು ಯಾಕೆ ಮಾಡಿದ್ರು , ಏನು ಅಂತ ಪೊಲೀಸರು ತನಿಖೆ ಮಾಡ್ತಾರೆ. ಜನರು ಶಾಂತಿ ಕಾಪಾಡಿ. ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಸಚಿವ ಮಹದೇವಪ್ಪ ಕರೆ.
ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಅಂತ ನಾನು ಹೇಳಿದ್ದೇನೆ, ಯಾರೇ ಆದ್ರೂ ತಪ್ಪು ಮಾಡಿದ್ರೆ ಶಿಕ್ಷೆ ಆಗತ್ತೆ. ಘಟನೆ ಯಿಂದ ಆರ್.ಎಸ್.ಎಸ್ ಕೈವಾಡ ಎಂಬ ಕೆಲವರ ಆರೋಪ ವಿಚಾರ. ಸಿಸಿಬಿ ಪೊಲೀಸರು ನಿಜ ಸತ್ಯ ಹೊರ ತರುವ ನಿರೀಕ್ಷೆಯಿದೆ. ಪೊಲೀಸರ ಕ್ರಮಕ್ಕೆ ನನ್ನ ಸಹಮತವಿದೆ. ಅಮಾಯಕರನ್ನು ಯಾರು ಬಂಧಿಸಿಲ್ಲ, ಮೈಸೂರಿನಲ್ಲಿ ಸಚಿವ ಮಹದೇವಪ್ಪ ಹೇಳಿಕೆ.
ಉದಯಗಿರಿ ಗಲಾಟೆ ವಿಚಾರ, ನಾಳೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳ ಜೊತೆ ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಈ ಸಭೆಗೆ ಹಾಜರಾಗುವರು. ಅವರಿಂದ ಘಟನೆ ಬಗ್ಗೆ ಸಿಎಂ ಮಾಹಿತಿಯನ್ನು ಪಡೆಯುತ್ತಾರೆ. ಮೈಸೂರಿನಲ್ಲಿ ಸಚಿವ ಮಹದೇವಪ್ಪ ಹೇಳಿಕೆ.
key words: Udayagiri fire, CM Siddaramaiah, calls meeting, Deputy Commissioner, Police Commissioner, in Bengaluru
SUMMARY:
Udayagiri fire: CM Siddaramaiah calls meeting of Deputy Commissioner, Police Commissioner in Bengaluru tomorrow