ಮೈಸೂರು, ಮಾ.11,2025 : ಇಲ್ಲಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿ ಸತೀಶ್ ಗಡಿಪಾರು ಆದೇಶಕ್ಕೆ ನ್ಯಾಯಾಲಯ ನೀಡಿರುವ ತಡೆಯಾಜ್ಞೆ ತೆರವಿಗೆ ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸರು ನೀಡಿದ್ದ ಗಡಿಪಾರು ನೋಟಿಸ್ ವಜಾಗೊಳಿಸಿದೆ.
ಗಡಿಪಾರು ನೋಟಿಸ್ ನೀಡುವಾಗ ಪೊಲೀಸರ ಕಾರ್ಯವಿಧಾನ ಲೋಪದಿಂದ ಕೂಡಿದೆ ಎಂಬ ಅಂಶವನ್ನು ಉಲ್ಲೇಖಿಸಿ ಕೋರ್ಟ್, ಪೊಲೀಸರು ನೀಡಿದ್ದ ಗಡಿಪಾರು ನೋಟಿಸ್ ವಜಾಗೊಳಿಸಿತು.
ಘಟನೆ ಹಿನ್ನೆಲೆ:
ವಿವಾದತ್ಮಕ ಪೋಸ್ಟ್ ನಿಂದ ಗಲಭೆಗೆ ಕಾರಣವಾದ ಆರೋಪ ಎದುರಿಸುತ್ತಿರುವ ಸತೀಶ್ ಅಲಿಯಾಸ್ ಪಾಂಡುರಂಗ ನ್ನನು ಗಡಿಪಾರು ಮಾಡುವ ಸಲುವಾಗಿ ಪೊಲೀಸರು ನೀಡಿದ್ದ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ನಿರ್ಬಂಧ ತೆರವುಗೊಳಿಸುವ ಸಲುವಾಗಿ ಪೊಲೀಸರು ಕಳೆದವಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ರಿವಿಜನ್ ಅರ್ಜಿ ಸಲ್ಲಿಸಿದ್ದರು.
ಈ ವೇಳೆ ಆರೋಪಿ ಪರ ವಕೀಲ ಅ.ಮ.ಭಾಸ್ಕರ್ , ತಡೆಯಾಜ್ಞೆ ತೆರವಿಗೆ ಆಕ್ಷೇಪಿಸಿದರು. ಆರೋಪಿ ಸತೀಶ್ ವಿರುದ್ಧ ಪೊಲೀಸರು ಹೊರಡಿಸಿರುವ ಗಡಿಪಾರು ಆದೇಶ ಕಾನೂನು ಬಾಹಿರ ಎಂಬುದನ್ನು ಪುನರುಚ್ಚರಿಸಿದರು. ಈ ಆದೇಶ ಹೊರಡಿಸುವ ಮುನ್ನ ಯಾವುದೇ ನಿಯಮವನ್ನು ಪಾಲಿಸಿಲ್ಲ. ಆರೋಪಿಯ ಆರೋಪದ ಬಗ್ಗೆ ಉಲ್ಲೇಖವಿಲ್ಲ, ತನಿಖಾ ವರದಿ ಸಹ ಇಲ್ಲ. ಜತೆಗೆ ಆರೋಪಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಸಹ ಇಲ್ಲ. ಇಷ್ಟಾದರೂ ಯಾವ ಕಾರಣಕ್ಕಾಗಿ ಗಡಿಪಾರು ನೋಟಿಸ್ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಪಟ್ಟು ಹಿಡಿದರು.ಪ್ರಕರಣದ ವಿಚಾರಣೆ ಆಲಿಸಿದ ನ್ಯಾಯಾಧೀಶರು, ಮಾ. 15 ಕ್ಕೆ ತೀರ್ಪು ಕಾಯ್ದಿರಿಸಿ ಮುಂದೂಡಿದ್ದರು.
ಇಂದು ಪ್ರಕರಣದ ವಿಚಾರಣೆ ನಡಿಸಿದ ನ್ಯಾಯಾಧೀಶರು, ಪೊಲೀಸರು ನೀಡಿದ್ದ ಗಡಿಪಾರು ನೋಟಿಸ್ ವಜಾಗೊಳಿಸಿ ಆದೇಶಿಸಿತು.
key words: Mysore Court, dismisses ,deportation notice, A blow to the police, udayagiri police,
summary :
Court dismisses deportation notice: A blow to the police
The court, hearing the application filed by the police seeking the lifting of the stay order issued by the court on the deportation order of accused Satish in a case registered under the jurisdiction of the Udayagiri police station here, has dismissed the deportation notice issued by the police.