ಉದಯಗಿರಿ ಗಲಭೆ ಕೇಸ್: ಆರೋಪಿಗೆ ಜೈಲಾ? ಬೇಲಾ? ಇಂದು ನಿರ್ಧಾರ

ಮೈಸೂರು,ಫೆಬ್ರವರಿ,15,2025 (www.justkannada.in): ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ  ವಿವಾದಿತ ಪೋಸ್ಟ್ ಹಾಕಿದ್ದಾರೆ ಎನ್ನಲಾದ ವ್ಯಕ್ತಿಯ ಜಾಮೀನಿನ ಬಗ್ಗೆ ಇಂದು ಕೋರ್ಟ್ ತೀರ್ಪು ನೀಡಲಿದೆ.

ವಿವಾದಿತ ಪೋಸ್ಟ್ ಮಾಡಿದ್ದ ಆರೋಪಿ ಸತೀಶ್ @ ಪಾಂಡುರಂಗ ಬಂಧಿಸಿದ್ದ ಪೊಲೀಸರು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿ ಸತೀಶ್ ಗೆ ಒಂದು ದಿನ ಪೊಲೀಸ್ ಕಸ್ಟಡಿ ವಿಧಿಸಿತ್ತು. ನಿನ್ನೆ ಅವಧಿಗೆ ಮುನ್ನವೇ ಪೊಲೀಸ್ ಕಸ್ಟಡಿ ಅಂತ್ಯಗೊಳಿಸಲಾಗಿತ್ತು. ಆರೋಪಿಯನ್ನ ಪೊಲೀಸ್ ಕಸ್ಟಡಿಯಿಂದ ಮತ್ತೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಪೊಲೀಸರು ಸ್ಥಳ ಮಹಜರ್ ಹಾಗೂ ಕೃತ್ಯಕ್ಕೆ ಬಳಸಿದ್ದಾರೆ ಎನ್ನಲಾದ ಮೊಬೈಲ್ ವಶಕ್ಕೆ ಪಡೆದಿದ್ದು ತನಿಖೆ ಮುಗಿಸಿ ನ್ಯಾಯಾಧೀಶರ ಎದುರು ಆರೋಪಿಯನ್ನ ಹಾಜರು ಪಡಿಸಿದ್ದರು. ಸ್ಥಳದಲ್ಲಿ ಹಾಜರಿದ್ದ ಆರೋಪಿ ಪರ ವಕೀಲ ಅ.ಮ.ಭಾಸ್ಕರ್  ವಾದ ಮಂಡನೆ ಮಾಡಿ ತಕ್ಷಣ ಜಾಮೀನು‌ ನೀಡುವಂತೆ ನ್ಯಾಯಾಧೀಶರ ಬಳಿ ಮನವಿ ಮಾಡಿದ್ದರು.

ಪರ- ವಿರೋಧ ಚರ್ಚೆ ಆಲಿಸಿದ ಎರಡನೆ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಇಂದಿಗೆ ಜಾಮೀನು ಆದೇಶದ ತೀರ್ಪು ಕಾಯ್ದಿರಿಸಿದೆ. ಕಿರಿಯಶ್ರೇಣಿ ನ್ಯಾಯಧೀಶರಾದ ಸರೋಜ ಅವರು ಇಂದು ಆರೋಪಿ ಸತೀಶ್ ಜಾಮೀನು ಕುರಿತು ಆದೇಶ ಹೊರಡಿಸಲಿದ್ದಾರೆ. ಹೀಗಾಗಿ ಆರೋಪಿ ಸತೀಶ್ ಗೆ ಜೈಲಾ? ಬೇಲಾ?  ಕಾದು ನೋಡಬೇಕಿದೆ.

Key words: Udayagiri, riot case, accused bail, Decision,  today