ವಿವಾದಿತ ಪೋಸ್ಟ್ ಹಂಚಿಕೆ, ಉದಯಗಿರಿ ಗಲಭೆ ಕೇಸ್: ಆರೋಪಿ ಜೈಲಿನಿಂದ ರಿಲೀಸ್

ಮೈಸೂರು,ಫೆಬ್ರವರಿ,18,2025 (www.justkannada.in):  ವಿವಾದಿದ ಪೋಸ್ಟ್  ಹಂಚಿಕೆ ಉದಯಗಿರಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸತೀಶ್  ಜೈಲಿನಿಂದ ರಿಲೀಸ್ ಆಗಿದ್ದಾರೆ.

ನಿನ್ನೆ ಮೈಸೂರಿನ ನ್ಯಾಯಾಲಯ ಆರೋಪಿ ಸತೀಶ್ @ ಪಾಂಡುರಂಗಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಇಂದು ಆರೋಪಿ ಸತೀಶ್ ಜೈಲಿನಿಂದ ರಿಲೀಸ್ ಆಗಿದ್ದಾರೆ. ಜೈಲಿನಿಂದ ರಿಲೀಸ್ ಆಗಿ ಸತೀಶ್ ಗೌಪ್ಯ ಸ್ಥಳಕ್ಕೆ ತೆರಳಿದ್ದಾರೆ.

ಆರೋಪಿ ಸತೀಶ್ ಗೆ ಮೈಸೂರು ಕೋರ್ಟ್ ನಿನ್ನೆ ಷರತ್ತುಬದ್ಧ ಜಾಮೀನು ನೀಡಿದೆ. 2 ನೇ ಅಪರ ಸಿವಿಲ್ ಕೋರ್ಟ್ ಈ ಆದೇಶ ಪ್ರಕಟಿಸಿದೆ.

ಫೆಬ್ರವರಿ 10 ರಂದು ಅವಹೇಳನಕಾರಿ ಪೋಸ್ಟ್ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಉದಯಗಿರಿ ಪೊಲೀಸ್ ಠಾಣೆ ಮೇಲೆ  ಗುಂಪು ಕಲ್ಲು ತೂರಾಟ ನಡೆದಿತ್ತು. ಘಟನೆಯಲ್ಲಿ 14 ಮಂದಿ ಪೊಲೀಸರು ಗಾಯಗೊಂಡಿದ್ದರು ಹಾಗೂ ಹಲವು ಪೊಲೀಸ್ ವಾಹನಗಳು ಜಖಂ ಆಗಿದ್ದವು. ಪೊಲೀಸರು ಹಲವು ಎಫ್ ಐ ಆರ್ ದಾಖಲಿಸಿ  ಹಲವರನ್ನ ಬಂಧಿಸಿದ್ದಾರೆ.

Key words: Udayagiri, riot, case, Accused, released, jail