ಮೈಸೂರು,ಜನವರಿ,22,2021(www.justkannada.in) : ಗಡಿವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪದೇ ಪದೇ ಕ್ಯಾತೆ ತಗೆಯುತ್ತಿದ್ದಾರೆ ಎಂದು ಆರೋಪಿಸಿ ಠಾಕ್ರೆಯ ಪ್ರತಿಕೃತಿಯನ್ನ ಮರಕ್ಕೆ ನೇಣು ಹಾಕಿ ಅಣಕು ಪ್ರದರ್ಶನ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮೈಸೂರು ಜಿಲ್ಲಾ ಕನ್ನಡ ಚಳುವಳಿಗಾರರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಶಿವಶಂಕರ್ ನೇತೃತ್ವದಲ್ಲಿ ಅಣಕು ಪ್ರದರ್ಶನ ನಡೆಸಲಾಯಿತು.
ಸಂಘದ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಗಡಿವಿಚಾರದಲ್ಲಿ ಠಾಕ್ರೆ ಪದೇ, ಪದೇ ಕ್ಯಾತೆ ತಗೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಭಾಗವನ್ನ ಅತಿಕ್ರಮಿಸೋಕೆ ಠಾಕ್ರೆ ಮುಂದಾಗುತ್ತಿದ್ದಾರೆ ಎಂದು ಕಿಡಿಕಾರಿದರು.

ಸರ್ಕಾರ ಮಹಾಜನ್ ವರದಿಯನ್ನು ಜಾರಿಮಾಡವೇಕೆಂದು ಆಗ್ರಹಿಸಿದರು.
key words : Udbhav Thackeray-Outrage-against-Replica-tree-Hanging-Mock-Exhibition