ಮೈಸೂರು,ಅಕ್ಟೋಬರ್,21,2020(www.justkannada.in): ಮಧ್ಯಮವರ್ಗಕ್ಕೆ ಉಡಾನ್ ಯೋಜನೆ ಬಹಳ ಸಹಕಾರಿ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು, ಮಾಜಿ ಅಧ್ಯಕ್ಷರು ಆದ ಸುಧಾಕರ್ ಎಸ್ ಶೆಟ್ಟಿ ನುಡಿದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಯೋಜಿಸಿದ್ದ “ ಕೋವಿಡ್ 19 ರ ಸನ್ನಿವೇಶದಲ್ಲಿ ವಿಮಾನಯಾನದ ಪ್ರಸ್ತುತ ಪರಿಸ್ಥಿತಿ ಮತ್ತು ಮುಂದಿನ ಸವಾಲುಗಳು” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು, ಮಾಜಿ ಅಧ್ಯಕ್ಷರು ಆದ ಸುಧಾಕರ್ ಎಸ್ ಶೆಟ್ಟಿ, ಉದಾನ್ ಉಡಾನ್ ಎಂಬುವುದು ಮಧ್ಯಮವರ್ಗಗಳ ಒಂದು ಸಂವಹನಕ್ಕೆ ಬಹು ಸಹಕಾರಿಯಾದ ಒಂದು ಯೋಜನೆ ಇದು . ಇದು ದೇಶದ ಸಣ್ಣ ಸಣ್ಣ ತಾಲೂಕು ಮುಖ್ಯ ಕೇಂದ್ರಗಳ ಕಡೆಯಿಂದ, ಡಿಸ್ಟ್ರಿಕ್ಟ್ ಮುಖ್ಯ ಕೇಂದ್ರಗಳ ಕಡೆಗೆ ಮೆಟ್ರೋ ಸಿಟಿ ಗಳಿಗೆ ಪ್ರಪಂಚದಾದ್ಯಂತ ಕನೆಕ್ಟ್ ಮಾಡುವಂಥದ್ದು. ಇದು ಮೂಲಭೂತ ಸೌಕರ್ಯಗಳಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಸೆಂಟ್ರಲ್ ನ್ಯಾಷನಲ್ ಸಿವಿಲ್ ಏವಿಯೇಷನ್ ಪಾಲಿಸಿ ಮೋದಿಜಿಯವರ ಬಹುದೊಡ್ಡ ಕನಸು. ಒಂದು ರಾಷ್ಟ್ರ ಒಂದೇ ರೀತಿಯ ಸಮಾನ ಸಹಬಾಳ್ವೆಗೆ ಪೂರಕವಾಗಿರಬೇಕು ಎಂಬುದಕ್ಕೆ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರು.
ಮೈಸೂರು ಪ್ರಪಂಚದಲ್ಲಿ ಒಂದು ವಿಶಿಷ್ಟ ಕ್ಷೇತ್ರ . ಪ್ರವಾಸಿಗರನ್ನು ಆಕರ್ಷಿಸುವ ಒಂದು ಸುಂದರ ನಗರ. ಇಲ್ಲಿ ಕೈಗಾರಿಕಾ ಬೆಳವಣಿಗೆಯೂ ಸಹ ಚೆನ್ನಾಗಿದೆ. ಸುಮಾರು 120 ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ 9 ಸಣ್ಣ ಇಂಡಸ್ಟ್ರಿಯಲ್ ಏರಿಯಾ ಇದೆ ಸುಮಾರು 15 ಸಾವಿರ ಎಕರೆ ಜಾಗ ಕೈಗಾರಿಕೆ ಗಳಿಗೋಸ್ಕರ ಮುಡುಪಾಗಿಟ್ಟಿದ್ದಾರೆ. ಮೈಸೂರಿಗೆ ಮಾತ್ರ ಅಂತರಾಷ್ಟ್ರೀಯ ಏರ್ಪೋರ್ಟ್ ಅಲ್ಲ. ಮಡಿಕೇರಿ, ಮಂಡ್ಯ, ಚಾಮರಾಜನಗರ ಈ ಭಾಗದ ಎಲ್ಲ ಮಧ್ಯಮ ವರ್ಗದಿಂದ ಉದ್ಯಮ ವಲಯದವರೆಗೂ ಏರ್ಪೋರ್ಟ್ ಸಹಕಾರಿಯಾಗುತ್ತದೆ. ಏರ್ಪೋರ್ಟ್ ಶ್ರೀಮಂತರಿಗೆ ಓಡಾಡುವುದಕ್ಕೆ ಮಾತ್ರವಲ್ಲ ಎಂಬುದು ನನ್ನ ಭಾವನೆ. ಏಕೆಂದರೆ ಮೈಸೂರಿಗೆ ಸುಮಾರು 60 ಲಕ್ಷ ಜನರು ಪ್ರವಾಸಿಗರು ಬಂದು ಹೋಗುತ್ತಾರೆ. ಪ್ರತಿದಿನ ನಾವು ಕಂಡಂತೆ ಏಳರಿಂದ ಒಂಬತ್ತು ಸಾವಿರದವರೆಗೆ ವಿದೇಶಿ ಪ್ರವಾಸಿಗರು ಬಂದು ಹೋಗುತ್ತಿದ್ದರು. ಆದ್ದರಿಂದ ನಾನಾದರೂ ಹೇಳುತ್ತೇನೆ ನಮ್ಮ ಈಗಿನ ಡೈರೆಕ್ಟರ್ ಒಬ್ಬ ಮೈಸೂರಿನ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡುವ ಚಿಂತಕ ,ಸದಾ ಕಾರ್ಯನಿರ್ವಾಹಕ ಮಂಜುನಾಥ್ ರವರು ಅವರು ಮೈಸೂರಿನಲ್ಲಿ ಇರುವಾಗಿನಿಂದಲೂ ಗೊತ್ತಿದೆ. ಹುಬ್ಬಳ್ಳಿ ಶಕ್ತಿ ಹೊಟ್ ತರಹ ಅಭಿವೃದ್ಧಿ ಮಾಡುತ್ತಾರೆ. ಮೈಸೂರಿಗೆ ಬಂದ ಮೇಲೆ ಮೈಸೂರಿನ ಸಂಸದರಾದ ಅಂತಹ ಪ್ರತಾಪ್ ಸಿಂಹ ಅವರ ಕನಸಿಗೆ ಪೂರಕವಾಗಿ ಡೈರೆಕ್ಟರ್ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಸುಧಾಕರ್ ಎಸ್ ಶೆಟ್ಟಿ ಶ್ಲಾಘಿಸಿದರು.
ಭಾರತ ದೇಶದ ಜನಸಂಖ್ಯೆಗೆ ಮತ್ತು ವಿಸ್ತೀರ್ಣಕ್ಕೆ ಹೋಲಿಸಿದರೆ ಭಾರತದಲ್ಲಿರುವ ಏರ್ಪೋರ್ಟ್ ಗಳು ಕಡಿಮೆಯಿರಬಹುದು ಭಾರತದಲ್ಲಿ 486 ಏರ್ಪೋರ್ಟ್ ಕಡಿಮೆ ಎಂದು ಹೇಳಬಹುದು. ಭಾರತದಲ್ಲಿ ಏರ್ಸ್ಕ್ರೀನ್ 486,ಹಾಗೂ 123 ಏರ್ಪೋರ್ಟ್ ಗಳಿವೆ. ಕರ್ನಾಟಕದಲ್ಲಿ 2 ಇಂಟರ್ನ್ಯಾಷನಲ್ ಏರ್ಪೋರ್ಟ್ ಬಳ್ಳಾರಿಯ ಜಿಂದಾಲ್ ರವರದು ಸೇರಿದ್ರೆ 6 ಡೊಮೆಸ್ಟಿಕ್ ಏರ್ಪೋರ್ಟ್ , ಬೆಳಗಾವಿ, ಬಳ್ಳಾರಿ ಹುಬ್ಬಳ್ಳಿ ಮೈಸೂರುಗಳಲ್ಲಿದೆ ಮೈಸೂರು ಏರ್ಪೋರ್ಟ್ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ಡಾಕ್ಟರ್ ಮಂಜುನಾಥ್ ರವರು ಬಂದ ಮೇಲೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಮೈಸೂರಿನ ಎಲ್ಲಾ ವರ್ಗಗಳು ಅಂದರೆ ಟ್ರಾವೆಲ್, ಬಿಸಿನೆಸ್ ಕಮಿನಿಟಿ ಇರಬಹುದು ,ಇಂಡಸ್ಟ್ರಿ ಇರಬಹುದು ಅಥವಾ ಅಧಿಕಾರಿವರ್ಗ ಇರಬಹುದು ಹಾಗೂ ಈಗಿರುವ ಪ್ರಸ್ತುತ ರಾಜಕೀಯ ನಾಯಕರ ಜೊತೆ ಒಳ್ಳೆಯ ಸಹ ಭಾವನೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಆದರೆ ದುರಾದೃಷ್ಟವಶಾತ್ ರನ್ ವೇ ಹೆಚ್ಚಾಗಿ ಅಂಡರ್ ಪಾಸ್ ಆಗಲೇಬೇಕಾಗಿದೆ. 115.34 ಕುಂಟೆ ಮರಸೆ ಗ್ರಾಮದ ಜಮೀನು ಇದಕ್ಕೆ ಬಂದು ಇಷ್ಟರೊಳಗೆ ಆಗಬೇಕಿತ್ತು.
ನಮಗೆ ಅಂಡರ್ ಪಾಸ್ ಆಗಿ ಏರ್ ಬಸ್ ಗಳು ಬಂದು ಇಳಿಯುವಂತಾಗಬೇಕು. ಎಟಿಆರ್ ಗಳು ಬಂದು ಹೋದಾಗ ಇಂಟರ್ನ್ಯಾಷನಲ್ ಟ್ರಾವೆಲರ್ಸ್, ಏರ್ ಬಸ್ ಒಂದು ಸಾರಿ ಲ್ಯಾಂಡ್ ಆಗುತ್ತೆ ಎಂದು ಹೇಳಿದಾಗ ನಮಗೆ ಚೆನ್ನೈ, ಬೆಂಗಳೂರು, ಬಾಂಬೆ, ಕಲ್ಕತ್ತಾ ನಮಗೆ ಬಹಳ ಸಮೀಪಕ್ಕೆ ಬರುತ್ತದೆ. ಒಂದು ಸಾರಿ ಏರ್ ಬಸ್ ಗಳು ಇಳಿಯಲಿಕ್ಕೆ ಶುರುವಾದರೆ ಇಂಟರ್ನ್ಯಾಷನಲ್ ಟ್ರಾವೆಲ್ಸ್ ನೇರವಾಗಿ ಮೈಸೂರಿಗೆ ಬರುವುದಕ್ಕೆ ಸಾಧ್ಯವಾಗುತ್ತದೆ ಎಂದು ಸುಧಾಕರ್ ಎಸ್ ಶೆಟ್ಟಿ ತಿಳಿಸಿದರು.
ನಂತರ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕರಾದ ಅರ್. ಮಂಜುನಾಥ್ ರವರು ಮಾತಾನಾಡಿ, ಮೈಸೂರು ವಿಮಾನ ನಿಲ್ದಾಣದ ಮುಂದಿನ ಪ್ರಗತಿಯ ಹಾದಿಯನ್ನು ಸವಿಸ್ತಾರವಾಗಿ ಮುಂದಿಟ್ಟರು ಹಾಗೂ ವಿಮಾನಯಾನದ ಮುಂದಿನ ಡಿಜಿಟಲಿಕರಣದ ಬಗ್ಗೆ ಹೇಳಿದರು. ಮೈಸೂರು ವಿಮಾನ ನಿಲ್ದಾಣದ ಮುಂದಿನ ಅಭಿವೃದ್ಧಿಯ ಪಥವನ್ನು ವಿವರಿಸಿದರು ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಯ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಉಪಾಧ್ಯಕ್ಷರಾದ ಎನ್ ಹೆಚ್. ಜಯಂತ್ ರವರು, ಕಾಯ್ದರ್ಶಿಗಳಾದ ಶ್ರೀ ಶೈಲ್ ರಾಮಣ್ಣನವರು, ಖಜಾಂಚಿಗಳಾದ ಎಂ. ಸಿ. ಬನ್ಸಾಲಿರವರು ವೇದಿಕಯನ್ನು ಹಂಚಿಕೊಂಡಿದ್ದರು. ಹಾಗೂ ವಿವಿಧ ಸಂಘಸಂಸ್ಥೆಗಳ ಪಧಾಧಿಕಾರಿಗಳು ಭಾಗವಹಿಸಿದರು.
Key words: Udon project – very -helpful – middle class – Sudhakar S Shetty-mysore