ಬೆಂಗಳೂರು,ಏಪ್ರಿಲ್,13,2021(www.justkannada.in) : ನಾಡಿನ ಸಮಸ್ತ ಜನತೆಗೆ ಯುಗಾದಿಯ ಹಾರ್ದಿಕ ಶುಭಾಶಯಗಳು. ನೂತನ ಪ್ಲವ ಸಂವತ್ಸರವು ಎಲ್ಲರ ಬಾಳಿನಲ್ಲಿ ಆರೋಗ್ಯ, ಸುಖ, ಸಮೃದ್ಧಿ, ಯಶಸ್ಸನ್ನು ಹೊತ್ತು ತರಲಿ, ಸಾಂಕ್ರಾಮಿಕ ರೋಗದ ಪಿಡುಗು ನಾಡಿನಿಂದ ತೊಲಗಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.
ನಾವೂ ಸುರಕ್ಷಿತರಾಗಿದ್ದು, ಇತರರೂ ಸುರಕ್ಷಿತರಾಗಿರುವಂತೆ, ಎಲ್ಲ ಮುನ್ನೆಚ್ಚರಿಕೆ ವಹಿಸಿ ಹಬ್ಬ ಆಚರಿಸೋಣ ಎಂದಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಹೊಸತನ, ನಿರೀಕ್ಷೆ, ಭರವಸೆಗಳನ್ನು ಹೊತ್ತು ಯುಗಾದಿ ಬಂದಿದೆ. ಕಳೆದ ವರ್ಷದ ತೊಡಕುಗಳು ಈ ಹೊಸ ವರ್ಷ ನೀಗಲಿ. ಬೇವು-ಬೆಲ್ಲದ ಅನುಭವಗಳು ಈ ವರ್ಷ ಸಮನಾಗಿರಲಿ ಎಂದು ನಾನು ಆಶಿಸುತ್ತೇನೆ. ಈ ಶುಭ ವರ್ಷ ಎಲ್ಲರಿಗೂ ಒಳಿತು ತರಲೆಂದು ಭಗವಂತನಲ್ಲಿ ನಾನು ಕೋರುತ್ತೇನೆ. ನಾಡಿನ ಸಮಸ್ತರಿಗೂ ಯುಗಾದಿ-ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಓ ಯುಗಾದಿಯೇ, ಹೊಸ ಕಾಲದ ಆದಿಯೇ, ಲೋಕದ ಜನರ ಕಷ್ಟಗಳ ನೀಗುತ್ತಾ ಬಾ… ಆರೋಗ್ಯದ ಭಾಗ್ಯವನ್ನು ಕರುಣಿಸು ಬಾ… ಎಲ್ಲರ ಬಾಳಲ್ಲಿ ಹೊಸ ವರ್ಷದ ಉತ್ಸಾಹ ತುಂಬುತ್ತಾ ಬಾ. ನಾಡಿನ ಎಲ್ಲ ನನ್ನ ಪ್ರೀತಿಯ ಬಂಧುಗಳಿಗೆ ಯುಗಾದಿಯ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.
key words : Ugadi Festival Celebration-CM B.S.Y-Former CM-Greetings-Requested