ನವದೆಹಲಿ:(www.justkannada.in) ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳ ಆರು ವಿಶ್ವವಿದ್ಯಾಲಯಗಳಿಗೆ ಹಲವಾರು ಕೌಶಲ್ಯ ಆಧಾರಿತ ಕೋರ್ಸ್ಗಳಿಗೆ ಅನುಮೋದನೆ ನೀಡಿದೆ.
ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ರೊಬೊಟಿಕ್ಸ್ ಸೇರಿದಂತೆ ಹಲವು ಪದವಿ ಕಾರ್ಯಕ್ರಮಗಳಿಗೆ ಯುಜಿಸಿ ಅನುಮೋದನೆ ನೀಡಿದ್ದು, ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್ಗಳನ್ನು ನೀಡಲು ಮುಂದಾಗಿವೆ.
ಆಗ್ರಾ ವಿಶ್ವವಿದ್ಯಾಲಯಕ್ಕೆ ಬ್ಯಾಚುಲರ್ ಇನ್ ವೊಕೇಶನಲ್ ((B.Voc)) ಪದವಿಯನ್ನು, ಕೊಯಮತ್ತೂರ್ ವಿಶ್ವವಿದ್ಯಾಲಯಕ್ಕೆ ಎಐ ಮತ್ತು ಯಂತ್ರ ಕಲಿಕೆಯಲ್ಲಿ ಬಿ. ವೋಕ್ ಪದವಿ ಕಾರ್ಯಕ್ರಮವನ್ನು ಆಯೋಗ ಅನುಮೋದಿಸಿದೆ.
ಬೆಂಗಳೂರಿನಲ್ಲಿರುವ JAIN ವಿಶ್ವವಿದ್ಯಾಲಯಕ್ಕೆ ಆಯೋಗವು ಡಿಜಿಟಲ್ ಮಾರ್ಕೆಟಿಂಗ್ ಫಂಡಮೆಂಟಲ್ಸ್, ಫಂಡಮೆಂಟಲ್ಸ್ ಆಫ್ ಪೇಟೆಂಟ್ಸ್, ಪ್ರೈವೆಟ್ ಬ್ಯಾಂಕಿಂಗ್ ಆಂಡ್ ಇಂಪೋರ್ಟ್ ಡಾಕ್ಯುಮೆಂಟೇಶನ್ ಕೋರ್ಸ್ಗಳನ್ನು ಅನುಮೋದಿಸಿದೆ.
ಒಟ್ಟಾರೆ ವಿಶ್ವವಿದ್ಯಾಲಯಗಳ ಮನವಿಗೆ ಸ್ಪಂದಿಸಿದ ಯುಜಿಸಿ ಹಲವು ಕೋರ್ಸ್ ಗಳನ್ನು ಅಥವಾ ಪದವಿ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.