ಲಂಡನ್,ಫೆಬ್ರವರಿ,25,2021(www.justkannada.in): ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ)ಗೆ 14 ಸಾವಿರ ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನೀರವ್ ಮೋದಿಯನ್ನ ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ಕೋರ್ಟ್ ಆದೇಶಿಸಿದೆ.
ಹಗರಣದಲ್ಲಿ ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಉದ್ಯಮಿ ನೀರವ್ ಮೋದಿಯನ್ನ ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಇಂಗ್ಲೆಂಡ್ ನ್ಯಾಯಾಲಯ ಹೇಳಿದೆ.
ಲಂಡನ್ ಜಿಲ್ಲಾ ನ್ಯಾಯಾಧೀಶ ಸ್ಯಾಮ್ಯುಯೆಲ್ ಗೂಸಿ ಅವರು ಭಾರತ ಸರ್ಕಾರದ ಅರ್ಜಿಗಳನ್ನ ಒಪ್ಪಿಕೊಂಡಿದ್ದು, ಗಡಿಪಾರು ಆದೇಶವನ್ನ ಹೊರಡಿಸಿದ್ದಾರೆ. ಲಂಡನ್ ಜೈಲಿಗಿಂತ ಮಹಾರಾಷ್ಟ್ರದ ಅರ್ಥರ್ ಜೈಲು ಚೆನ್ನಾಗಿದೆ ನೀರವ್ ಮೋದಿ ಅಲ್ಲಿಯೇ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದ್ದಾರೆ.
ಭಾರತದಲ್ಲಿ ವಿಚಾರಣೆ ಎದುರಿಸಲು ಉನ್ನತ ಮಟ್ಟದ ಜ್ಯುವೆಲರ್ʼಗೆ ಸಂಬಂಧಿಸಿದ ಪ್ರಕರಣವು ಪ್ರಬಲವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದು, ನೀರವ್ ಮೋದಿ ಮತ್ತು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಇತರ ಕಾನ್ನಿವರ್ಸ್ʼಗಳ ನಡುವೆ ಸಂಪರ್ಕವಿದೆ ಎಂದು ಅವರು ಹೇಳಿದ್ದಾರೆ.
Key words: UK -court -orders -extradition – businessman – Exile-Neerav Modi – India